ಮನೆ ಕಾನೂನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀಗಳ ಬಿಡುಗಡೆ

ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀಗಳ ಬಿಡುಗಡೆ

0

ಬೆಂಗಳೂರು: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀಗಳ ಬಿಡುಗಡೆ ಮಾಡಲಾಗಿದೆ. ಮುರುಘಾಶ್ರೀ ಬಿಡುಗಡೆಗೆ ಹೈಕೋರ್ಟ್‌ ನ ನ್ಯಾ.ಸೂರಜ್ ಗೋವಿಂದರಾಜ್‌ ರವರಿದ್ದ ಪೀಠ ಆದೇಶ ನೀಡಿತ್ತು.ಜಿಲ್ಲಾ ನ್ಯಾಯಾಲಯದ ಆದೇಶದಿಂದ ಆರೋಪಿ ಮುರುಘಾಶ್ರೀಗೆ ಅನ್ಯಾಯವಾಗಿದೆ. ಹಾಗಾಗಿ ಜಾಮೀನು ರಹಿತ ಬಂಧನದ ವಾರೆಂಟ್​ ಗೆ ಹೈಕೋರ್ಟ್ ತಡೆ ನೀಡಲಾಗಿತ್ತು. ಚಿತ್ರದುರ್ಗಕ್ಕೆ ಕರೆತಂದಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ. ಮುರುಘಾಶ್ರೀ ಬಿಡುಗಡೆಗೊಳಿಸುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಬಿಡುಗಡೆಯ ಬಳಿಕ ದಾವಣಗೆರೆ ವಿರಕ್ತ ಮಠದತ್ತ ತೆರಳಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಮುರುಘಾಶ್ರೀ, ನಾವು ಸೂಕ್ತವಾದ ಸಂದರ್ಭದಲ್ಲಿ ವಿಚಾರ ಹಂಚಿಕೊಳ್ಳುತ್ತೇವೆ. ನಾವು ಈಗ ಮತ್ತೆ ಮೌನಕ್ಕೆ ಸರಿಯುತ್ತಿದ್ದೇವೆ. ಮುಂದೆ ಮಾತಾಡುತ್ತೇವೆ. ಸದ್ಯ ನೋ ಕಾಮೆಂಟ್ಸ್ ಎಂದಿದ್ದಾರೆ.

ಮುರುಘಾಶ್ರೀ ವಿರುದ್ಧದ 2ನೇ ಪೋಕ್ಸೋ ಕೇಸ್​ನಲ್ಲಿ ಮಧ್ಯಂತರ ಆದೇಶವಿದೆ. ಮುಂದಿನ ಆದೇಶದವರೆಗೂ ವಿಚಾರಣೆ ಮುಂದೂಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 1ನೇ ಪೋಕ್ಸೋ ಕೇಸ್​ನಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ಚಿತ್ರದುರ್ಗ ಪ್ರವೇಶಿಸದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸೂಚಿಸಿದೆ. ಹೀಗಿರುವಾಗ ಸ್ಥಳೀಯ ಅಭಿಯೋಜಕರು ಜಿಲ್ಲಾ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಮುರುಘಾಶ್ರೀ ಕೋರ್ಟ್​ಗೆ ಹಾಜರಾಗುತ್ತಿಲ್ಲವೆಂದು ದೂರಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಹೈಕೋರ್ಟ್ ಸೂಚಿಸಿಲ್ಲವೆಂದು ವಾದಿಸಿದ್ದಾರೆ. ಆದರೂ ವಾರಂಟ್ ಹೊರಡಿಸಲು ಜಿಲ್ಲಾ ಕೋರ್ಟ್​ಗೆ ಅಭಿಯೋಜಕರ ಅರ್ಜಿ ಕೋರಿರುವುದು ಅಚ್ಚರಿದಾಯಕವಾಗಿದೆ. ಹೈಕೋರ್ಟ್ ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ವಿಧಿಸಿದೆ. ಹೈಕೋರ್ಟ್ ಆದೇಶದಂತೆ ವಿಚಾರಣೆಯನ್ನು ಮುಂದೂಡಬೇಕಿತ್ತು. ಆದರೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಕೇಸ್ ಬೇರೆಯದಾದರೂ ನಿರ್ಬಂಧ ಬದಲಾಗುವುದಿಲ್ಲ. ಈಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಡುವ  ಠೇವಣಿ ಹಣವನ್ನು ಸಹಕಾರಿ   ಬ್ಯಾಂಕುಗಳಲ್ಲಿಯೇ  ತೊಡಗಿಸುವ ಬಗ್ಗೆ ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ