ಮನೆ ರಾಜ್ಯ ಬಿಎಂಟಿಸಿ ನೌಕರರ ದೂರು: ಜಿ. ಸತ್ಯವತಿ ವರ್ಗಾವಣೆ, ನೂತನ ಎಂಡಿಯಾಗಿ‌ ರಾಮಚಂದ್ರನ್ ನೇಮಕ

ಬಿಎಂಟಿಸಿ ನೌಕರರ ದೂರು: ಜಿ. ಸತ್ಯವತಿ ವರ್ಗಾವಣೆ, ನೂತನ ಎಂಡಿಯಾಗಿ‌ ರಾಮಚಂದ್ರನ್ ನೇಮಕ

0

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯ ಅಹವಾಲುಗಳಿಗೆ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಜಿ. ಸತ್ಯವತಿ ವರ್ಗಾವಣೆ ಮಾಡಲಾಗಿದೆ.

ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ. ಅವರ ಜಾಗಕ್ಕೆ ಮತ್ತೊಬ್ಬ ಐಎಎಸ್‌ ಅಧಿಕಾರಿ ಸದ್ಯ ಬಿಬಿಎಂಪಿ ವಿಶೇಷ ಆಯುಕ್ತ (ಚುನಾವಣೆ) ಆರ್.ರಾಮಚಂದ್ರನ್‌ ಅವರನ್ನು ನೇಮಿಸಲಾಗಿದೆ.

ಕೆಎಸ್‌ ಆರ್‌ಟಿ ಸಿ ಸ್ಟಾಫ್‌ ಆ್ಯಂಡ್‌ ವರ್ಕಸ್‌ ಫೆಡರೇಷನ್‌ ಜೊತೆಗೆ ಸತ್ಯವತಿ ಅವರು ಉತ್ತಮ ಸಂಬಂಧ ಹೊಂದಿರಲಿಲ್ಲ. ಈ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಫೆಡರೇಷನ್‌ ನ ಪ್ರಮುಖರೊಬ್ಬರು ಹೇಳಿದರು.

2023ರ ಡಿ. 24ರಂದು ಸತ್ಯವತಿ ಅವರಿಗೆ ಪತ್ರವೊಂದನ್ನು ಬರೆದಿದ್ದ ಫೆಡರೇಷನ್‌, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇ ಕಾರಣಕ್ಕೆ 100 ಎಲೆಕ್ಟ್ರಿಕ್ ಹವಾ ನಿಯಂತ್ರಿತವಲ್ಲದ ಬಸ್‌ ಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನೂ ಬಹಿಷ್ಕರಿಸಿತ್ತು.

ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತ್ ಸುಬ್ಬರಾವ್ ಮಾತನಾಡಿ, ಸತ್ಯವತಿ ಅವರು ಒಂದು ಬಾರಿಯೂ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿಲ್ಲ. ಬಿಎಂಟಿಸಿ ನೌಕರರ ಜೊತೆ ಸಂವಾದವನ್ನೂ ನಡೆಸಿಲ್ಲ. ಅವರನ್ನು ಬದಲಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು ಎಂದರು.

ಸಾರಿಗೆ ನೌಕರರ ಕುಂದುಕೊರತೆಗಳಿಗೆ ಸತ್ಯವತಿ ಸ್ಪಂದಿಸುತ್ತಿಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೂರು ಸಲ್ಲಿಸಲಾಗಿತ್ತು.

ಹಿಂದಿನ ಲೇಖನಲೋಕಸಭೆ ಚುನಾವಣೆ: ಜ.12ರಿಂದ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪ್ರವಾಸ
ಮುಂದಿನ ಲೇಖನಮೂವರು ಡಿಸಿಎಂಗೆ ಯಾವ ಶಾಸಕರೂ ವಿರೋಧ ಮಾಡಿಲ್ಲ: ಸಚಿವ ಕೆ.ಎನ್.ರಾಜಣ್ಣ