ಮನೆ ಅಪರಾಧ ಮೈಸೂರು: ಆದಿಲ್ ಖಾನ್ ದುರಾನಿಗೆ 5 ದಿನ ಪೊಲೀಸ್ ಕಸ್ಟಡಿ

ಮೈಸೂರು: ಆದಿಲ್ ಖಾನ್ ದುರಾನಿಗೆ 5 ದಿನ ಪೊಲೀಸ್ ಕಸ್ಟಡಿ

ನನಗೆ ನ್ಯಾಯಕೊಡಿಸಿ ಎಂದು ಗಳಗಳನೇ ಅತ್ತ ರಾಖಿ ಸಾವಂತ್

0

ಮೈಸೂರು: ಬಾಲಿವುಡ್ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ಮೈಸೂರು ನ್ಯಾಯಾಲಯ ಆದೇಶಿಸಿದೆ.

ಇಂದು ಆದಿಲ್ ಖಾನ್ ದುರಾನಿಯನ್ನು ಮೈಸೂರಿನ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪೊಲೀಸರ ಮನವಿಗೆ ಸಮ್ಮತಿಸಿ ಸಮ್ಮತಿಸಿ ಅದಿಲ್ ಖಾನ್ ದುರಾನಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ನ್ಯಾಯಾಲಯ ಮುಂದೂಡಿದ್ದು, ಅಲ್ಲಿಯವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದುಕೊಂಡು ವಿಚಾರಣೆ ಎದುರಿಸಬೇಕಾಗಿದೆ.

ಇರಾನ್ ಮೂಲದ ವಿದ್ಯಾರ್ಥಿ ನಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಆದಿಲ್ ಖಾನ್ ಎದುರಿಸುತ್ತಿದ್ದಾನೆ. ಈ ಸಂಬಂಧ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈಗೆ ತೆರಳಿ ಆದಿಲ್ ಖಾನ್ ನನ್ನು ಮೈಸೂರಿಗೆ ಕರೆ ತಂದಿದ್ದಾರೆ.

ಈಗಾಗಲೇ ರಾಖಿ ಸಾವಂತ್ ದಾಖಲಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದನು.

ನನಗೆ ನ್ಯಾಯ ಕೊಡಿಸಿ

ಇದೇ ಪ್ರಕರಣದ ವಿಚಾರವಾಗಿ ಇರಾನ್ ಯುವತಿಗೆ ಬೆಂಬಲವಾಗಿ ನಿಲ್ಲಲು ಮೈಸೂರಿನ ನ್ಯಾಯಾಲಯಕ್ಕೆ ಆಗಮನ ಆಗಮಿಸಿದ್ದಾರೆ.

ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು ಎಂದು ರಾಖಿ ಸಾವಂತ್ ತಿಳಿಸಿದ್ದಾರೆ.

ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌. ಮೈಸೂರಿನ ಜನರು ಸರಿ ಇಲ್ಲವೆಂದು ನನ್ನ ಬಳಿ ಹೇಳಿದ. ಇದರಿಂದ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ನನಗೆ ವಿಶ್ವಾಸ ಇದೆ, ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಡುತ್ತಲೇ ಮಾಧ್ಯಮಗಳ ಮುಂದೆ ಮನವಿ ಮಾಡಿದರು.

ಹಿಂದಿನ ಲೇಖನನೇಪಾಳದಲ್ಲಿ 4.8 ತೀವ್ರತೆ ಭೂಕಂಪ
ಮುಂದಿನ ಲೇಖನಕೌಟುಂಬಿಕ ಕಲಹ: ಪತ್ನಿ, ಮಕ್ಕಳನ್ನು ಕೊಂದ ವ್ಯಕ್ತಿ