ಮೈಸೂರು: ವೈರಾಗ್ಯ ಜೀವನವನ್ನು ತ್ಯಾಗ ಮಾಡಿ ಇಡೀ ಜಗತ್ತಿಗೆ ಬೆಳಕು ನೀಡಿದವರು ಬುದ್ಧ. ಬುದ್ಧ ಎಂದರೆ ಬೆಳಕು ಇಂತಹ ಮಹಾನ್ ವ್ಯಕ್ತಿಯು ನಮಗೆ ಇಂದಿಗೂ ಸಹ ಆದರ್ಶವಾಗಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ವಿಧಾನ ಸಭೆಯ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ್ ಬುದ್ಧ ಜಯಂತ್ಯೋತ್ಸವ ಸಮಿತಿ ಇವರ ಸಹಯೋಗದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ, ಭಗವಾನ್ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಭಗವಾನ್ ಬುದ್ಧ ಇರುವಂತಹ ನಡುವಿನ ಅನೇಕ ವಿಚಾರಗಳನ್ನು ನೋಡಿದ್ದೇವೆ. ಅವರು ಮಹಾರಾಜರಾಗಿದ್ದ ಅವರು ಸಿದ್ದಾರ್ಥರಾಗಿ ಅವರು ರಸ್ತೆಯಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಯಾರು ಒಬ್ಬ ರೋಗಿ, ವೃದ್ಧ ಹಾಗೂ ಶವವನ್ನು ನೋಡಿದರು. ಈ ಮೂರು ನನ್ನ ರಾಜ್ಯದ ಸಾಮ್ರಾಜ್ಯದಲ್ಲಿ ಇಂತಹ ಘಟನೆಗಳು ನೋಡಿದಾಗ ಇದರ ಬಗ್ಗೆ ತಿಳಿದುಕೊಳ್ಳಲು ಗುರುಗಳ ಬಳಿ ಹೋಗಿ ಕೇಳಿದಾಗ. ನಿನಗೆ ಎಲ್ಲದಕ್ಕೂ ಉತ್ತರ ಸಿಗಬೇಕು ಎನ್ನುವುದಾದರೆ ನೀನು ವೈರಾಗ್ಯ ಆಗಬೇಕು. ಆಗ ಮಾತ್ರ ನಿನಗೆ ಪೂರ್ಣ ಅರಿವು ಆಗುತ್ತದೆ ಎಂದು ಅವರು ತಿಳಿಸಿಕೊಟ್ಟರು. ನಂತರ ಭಗವಾನ್ ಬುದ್ಧ ದೀರ್ಘ ಕಠಿಣವಾದಂತಹ ೨೬ ವ?ಗಳ ತಪಸ್ಸನ್ನು ಮಾಡಿದ ಅವರಿಗೆ ಭೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿ ಇಡೀ ಜಗತ್ತಿಗೆ ಬೆಳಕನ್ನು ನೀಡಿದರು. ಬೌದ್ಧ ಧರ್ಮವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಆಸೆಯ ದುಃಖಕ್ಕೆ ಮೂಲ ಕಾರಣ, ದುಃಖ ಎನ್ನುವುದು ಇದೆ ಎಂದರೆ ಆ ದುಃಖ ಎನ್ನುವುದು ನಮ್ಮ ಅಸ್ತಿತ್ವದಲ್ಲಿಯೇ ಇದೆ, ನಮ್ಮ ಮನಸ್ಸಿನಲ್ಲಿಯೇ ಇದೆ, ಅದಕ್ಕೆ ಅವರು ೮ ಹೆಜ್ಜೆಗಳ ಬಗ್ಗೆ ಹೇಳಿದ್ದಾರೆ. ಸರಿಯಾದ ತಿಳುವಳಿಕೆ, ಸರಿಯಾದ ಉದ್ದೇಶ, ಸರಿಯಾದ ಮಾತು, ಸರಿಯಾದ ನಡವಳಿಕೆ, ಸರಿಯಾದ ಜೀವನದ ರೀತಿಯ ಆಯ್ಕೆ, ಸರಿಯಾದ ಪ್ರಯತ್ನ, ಸರಿಯಾದ ಎಚ್ಚರ, ಸರಿಯಾದ ಕೇಂದ್ರೀಕೃತ ಮನಸ್ಸು ಈ ೮ ಹೆಜ್ಜೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ. ನಮ್ಮ ಮನಸ್ಸಿನಲ್ಲಿ ಏನು ಆಸೆ ದುರಾಸೆ ಎಲ್ಲವೂ ದೂರ ಆಗುತ್ತದೆ ಎಂದು ತಿಳಿಸಿದರು.
ಅಪಾರ ಜಿಲ್ಲಾಧಿಕಾರಿಯಾದ ಡಾ. ಪಿ. ಶಿವರಾಜು ಅವರು ಮಾತನಾಡಿ ಭಗವಾನ್ ಬುದ್ಧ ಈ ಜಗತ್ತಿನ ಬೆಳಕು. ನಾವು ಕೆಲವೇ ಕೆಲವು ದಾಶಿಕರು, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲನೆ ಮಾಡಿಕೊಳ್ಳುತ್ತಾ ಅವರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ೨೫೬೯ ವ? ಅವರ ಯುದ್ಧ ಕಾಲಘಟ್ಟ ಮತ್ತು ಇವತ್ತು ನಾವು ಇರುವಂತಹ ಕಾಲಘಟ್ಟಕ್ಕೆ ಇರುವಂತಹ ಅಂತರ ತುಂಬಾ ಇದೆ. ಆದರೆ ಬುದ್ಧರಿಗೂ ನಮಗೂ ಇರುವಂತಹ ಅ? ದೂರ ಇಲ್ಲ ಏಕೆಂದರೆ ಅವರು ನಮ್ಮ ಎಲ್ಲರ ಮನಸ್ಸಿನ ಒಳಗಡೆ ಇದ್ದಾರೆ ಎಂದು ಹೇಳಿದರು.
ಭಗವಾನ್ ಬುದ್ಧ ೭೦-೮೦ ತಲೆಮಾರುಗಳಿಂದ ಇಡೀ ಜಗತ್ತಿಗೆ ಗೊತ್ತಿದ್ದಾರೆ ಅಂತಹ ಮಹಾನ್ ವ್ಯಕ್ತಿ ನಮ್ಮ ಎಲ್ಲರಿಗೂ ತಿಳಿದಿದ್ದಾರೆ. ಅವರ ಆದರ್ಶಗಳು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅತಿ ಹೆಚ್ಚಾಗಿ ಪಾಲನೆ ಮಾಡಬೇಕು. ಅವರು ತೋರಿಸುವಂತಹ ಶಾಂತಿ, ಅಹಿಂಸೆ, ಮತ್ತೊಬ್ಬರಿಗೆ ಗೌರವ ಕೊಡುವ ರೀತಿ, ಯಾರಿಗೂ ಸಹ ಅವಹೇಳನ ಮಾಡಬಾರದು ಈ ರೀತಿಯ ಎಲ್ಲಾ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬುದ್ಧ ಪೂರ್ಣಿಮೆಯ ದಿನ ಅವರಿಗೆ ಜ್ಞಾನೋದಯವಾಯಿತು. ಭಗವಾನ್ ಬುದ್ಧರನ್ನು ಬೆಳಕು ಎಂದು ಕರೆಯುವುದ? ಅಲ್ಲ, ಇಡೀ ಜಗತ್ತಿಗೆ ಅವರು ಬೆಳಕನ್ನು ತೋರಿಸಿ ಅವರೇ ಪೌರ್ಣಮಿಯ ಸಾಂಕೇತಿಕವಾಗಿದ್ದಾರೆ ಅನಿಸುತ್ತದೆ ಎಂದು ಹೇಳಿದರು. ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಡಾಕ್ಟರ್ ಕಲ್ಯಾಣ ಸಿರಿ ಭಾಂತೇಜಿ ಅವರು ಮಾತನಾಡಿ ಭಗವಾನ್ ಬುದ್ಧ ಜನಿಸುವವರೆಗೂ ಅಜ್ಞಾನದ ಅಂದಕಾರದಲ್ಲಿ ಜಗತ್ತು ಇತ್ತು. ಅದನ್ನು ಪರಿಪೂರ್ಣವಾಗಿ ಬೌದ್ಧನಾಗಿಸಿ ಬೆಳಕನ್ನು ಕೊಟ್ಟಂತಹ ದಿನ ಇವತ್ತು ಎಂದು ಹೇಳಿದರು.
ಈ ದಿನ ತುಂಬಾ ವಿಶೇ?ಕರವಾದದ್ದು, ಯಾಕೆಂದರೆ ಬುದ್ಧ ಜನಿಸಿದ್ದು ವೈಶಾಖ ಪೂರ್ಣಿಮೆ ದಿನ. ಅವರಿಗೆ ಜ್ಞಾನೋದಯವಾಗಿದ್ದು ವೈಶಾಖ ಪೂರ್ಣಿಮೆ ದಿನ ಹಾಗೆ ಅವರು ಮಹಾಪರಿವಿಭೂಷಣ ಹೊಂದಿದಂತಹ ದಿನ ಕೂಡ ಇದೇ ವೈಶಾಖ ಪೂರ್ಣಿಮೆ ದಿನ. ಇದು ಜಗತ್ತಿನಲ್ಲೇ ಈ ೩ ಕ್ರಿಯೆಗಳು ನಡೆದಿರುವಂತದ್ದು, ಭಗವಾನ್ ಬುದ್ಧರಲ್ಲಿ ಮಾತ್ರ ನಾವು ಕಾಣಲಿಕ್ಕೆ ಸಾಧ್ಯ ಎಂದು ತಿಳಿಸಿದರು. ೨೫೬೯ ವ?ಗಳಾಗಿ ಇ? ವ?ಗಳವರೆಗೂ ಕೂಡ ಬುದ್ಧ ಧರ್ಮ ವಿಶ್ವದ್ಯಾಂತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಎಂದರೆ ಅದರ ಒಂದು ಮಹತ್ವ ಎ? ಮಾನವೀಯ ಮೌಲ್ಯಗಳಿಂದ ತುಂಬಿದೆ ಎನ್ನುವಂತದ್ದು ಎಂದು ಹೇಳಿದರು.
ಬುದ್ಧ ಎಂದರೆ ಪರಿಪೂರ್ಣ ಎಚ್ಚರಗೊಂಡಂತಹ ವ್ಯಕ್ತಿ. ಪರಿಪೂರ್ಣವಾಗಿ ಎಚ್ಚರಗೊಂಡು ಮತ್ತೆ ಸಮೂಹ ಸಮೃದ್ಧಿಯನ್ನು ಪಡೆದುಕೊಂಡಿರುವ ಅಖಂಡ ಜ್ಞಾನವನ್ನು ಗಳಿಸಿರುವ ಸರ್ವಜ್ಞಾನೀಯ ಸ್ವರೂಪವೇ ಬುದ್ಧ ಎಂದು ಹೇಳಿದರು. ಪ್ರಪಂಚದಲ್ಲಿ ಪರಿಪೂರ್ಣ ಜ್ಞಾನೋದಯ ಕಂಡಂತಹ ಏಕೈಕ ಮಹಾನ್ ವ್ಯಕ್ತಿ ಬುದ್ಧ ಇವರು ಯಾವುದೇ ದೇವ ದೂತರಲ್ಲ, ದೇವರ ಮಗನಲ್ಲ, ದೇವರ ಸ್ವರೂಪವಲ್ಲ, ಮಾನವರು ಅಲ್ಲ, ಈ ಎಲ್ಲವನ್ನು ಮೀರಿರುವಂತಹ ಸಮಯ ಸಂಭೋಗಿಯನ್ನು ಪಡೆದಿರುವಂತಹ ಮಹಾನ್ ಪುರು?ರು, ಮಾರ್ಗದರ್ಶಕರು ಎಂದು ತಿಳಿಸಿದರು.
ಲೇಖಕರು ಮತ್ತು ಪ್ರಾಧ್ಯಾಪಕರು ಡಾ. ರಹಮತ್ ತರೀಕೆರೆ ಅವರು ಮಾತನಾಡಿ ಬುದ್ಧ ಪೂರ್ಣಿಮೆಯನ್ನು ವೈಶಾಖ ಅಥವಾ ಬುದ್ಧ ಜಯಂತಿ ಎಂದೂ ಕರೆಯುತ್ತಾರೆ, ಇದು ಭಗವಾನ್ ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣವನ್ನು ಸೂಚಿಸುತ್ತದೆ. ಇದು ಪ್ರಪಂಚದಾದ್ಯಂತ ಬೌದ್ಧರಿಗೆ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ, ಇದನ್ನು ಬಹಳ ಭಕ್ತಿ, ಆಧ್ಯಾತ್ಮಿಕ ಉತ್ಸಾಹ ಮತ್ತು ಸಾಂಸ್ಕೃತಿಕ ಮಹತ್ವದಿಂದ ಆಚರಿಸಲಾಗುತ್ತದೆ. ಹಿಂದೂ ಮಾಸ ವೈಶಾಖದಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಬುದ್ಧ ಪೂರ್ಣಿಮೆಯು ಹಲವಾರು ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿದೆ ಮತ್ತು ಶಾಂತಿ, ಕರುಣೆ ಮತ್ತು ಸಾವಧಾನತೆಯ ಸಮಯವಾಗಿದೆ ಎಂದು ತಿಳಿಸಿದರು.
ಯಾರು ಬೇಕಾದರೂ ಬುದ್ಧ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ. ಭಗವಾನ್ ಬುದ್ಧ ರಾಜಕೀಯ ಯುದ್ಧದಿಂದ ವಿಮುಕ್ತರಾದರು ಆದರೆ ಸಾಮಾಜಿಕ ಯುದ್ಧಗಳಿಂದ ದೂರ ಉಳಿದು ಒಂದು ಯುದ್ಧದಿಂದ ವಿನುತರಾಗಿ ಇನ್ನೊಂದು ಯುದ್ಧಕ್ಕೆ ತೊಡಗಿದರು. ಯುದ್ಧ ಭಾರತದಲ್ಲಿ ಸಮಾನತೆಯನ್ನು ಸಾಮಾಜಿಕವಾಗಿ ಸಮಾನತೆಯನ್ನು ತರುವಂತ ಯುದ್ಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಎಂ. ಡಿ. ಸುದರ್ಶನ್, ಮಹಾಬೋಧಿ ನಿರ್ದೇಶಕರಾದ ಪೂಜ್ಯ ಸೇವಾನ ಭಂತೇಜಿ, ಕರ್ನಾಟಕ ಬುದ್ಧ ಧರ್ಮ ಸಮಿತಿಯ ಜಗನ್ನಾಥ ಬೋಧಿ ಸತ್ವ ಚಾರಿಟಬಲ್ ಟ್ರಸ್ಟ್ , ಅರಿವು ಬುದ್ಧ ಜ್ಞಾನ ಕೇಂದ್ರ ಕೆ.ಆರ್. ಗೋಪಾಲ ಕೃ?, ಇಂದ್ರಮ ಹಾಗೂ ಮತ್ತಿತರು ಉಪಸ್ಥಿತರಿದ್ದರು.















