ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ್ದ ಟಿ.ಜೆ ಅಬ್ರಾಹಂ ವಿರುದ್ದವೇ ದೂರು ಸಲ್ಲಿಸಲಾಗಿದೆ.
ಟಿ.ಜೆ ಅಬ್ರಾಹಂ ವಿರುದ್ದ ಸಾಮಾಜಿಕ ಕಾರ್ಯಕರ್ತ ಆಲಂಪಾಷಾ ಎಂಬುವವರು ರಾಜ್ಯಪಾಲರಿಗೆ 15 ಪುಟಗಳ ದೂರು ನೀಡಿದ್ದು ಟಿ.ಜೆ ಅಬ್ರಾಹಂ ಮನವಿಯನ್ನ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಟಿಜೆ ಅಬ್ರಾಹಂ ಅಪ್ರಮಾಣಿಕ ವ್ಯಕ್ರಿ. ವ್ಯಕ್ತಿತ್ವ ಸರಿ ಇಲ್ಲ. ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ವಿರುದ್ದ ದೂರು ನೀಡಿದ್ದರು. ಆದರೆ ಯಾವ ಆರೋಪವೂ ಸಾಬೀತಾಗಿಲ್ಲ. ಅಬ್ರಹಾಂಗೆ ಸುಪ್ರೀಂಕೋರ್ಟ್ ದಂಡ ವಿಧಿಸಿತ್ತು. ಹೀಗಾಗಿ ಅವರ ದೂರನ್ನ ಪರಿಗಣಿಸಬೇಡಿ ಎಂದು ಆಲಂಪಾಷಾ ಮನವಿ ಮಾಡಿದ್ದಾರೆ ಎನ್ನಲಾಗಿದೆ.
Saval TV on YouTube