ಮನೆ ರಾಜಕೀಯ ಕಾಂಗ್ರೆಸ್ ಹಿರಿಯ ನಾಯಕ ಪಂಡಿತ್ ಸುಖ್‌ ರಾಮ್  ವಿಧಿವಶ

ಕಾಂಗ್ರೆಸ್ ಹಿರಿಯ ನಾಯಕ ಪಂಡಿತ್ ಸುಖ್‌ ರಾಮ್  ವಿಧಿವಶ

0

ನವದೆಹಲಿ(New Delhi): ಕಾಂಗ್ರೆಸ್ ಹಿರಿಯ ನಾಯಕ(Congress senior leader), ಮಾಜಿ ಕೇಂದ್ರ ಸಚಿವ(Ex central minister) ಪಂಡಿತ್ ಸುಖ್‌ ರಾಮ್(Pandith sukh ram)  ಬುಧವಾರ ಮುಂಜಾನೆ ನಿಧನರಾಗಿದ್ದಾರೆ(Passes away).

95 ವರ್ಷದ ಪಂಡಿತ್ ಸುಖ್‌ ರಾಮ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅನಿಲ್ ಶರ್ಮಾ ಹೇಳಿದರು. ಹಿಮಾಚಲ ಪ್ರದೇಶದ ಮಂಡಿಯ ಆಸ್ಪತ್ರೆಯಲ್ಲಿ ಪಂಡಿತ್ ಸುಖ್‌ ರಾಮ್ ಮೊದಲು ಚಿಕಿತ್ಸೆ ಪಡೆಯುತ್ತಿದ್ದರು. ಬ್ರೈನ್‌ ಸ್ಟ್ರೋಕ್ ಉಂಟಾದ ಹಿನ್ನಲೆಯಲ್ಲಿ ಮೇ 7ರಂದು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಹೆಲಿಕಾಪ್ಟರ್ ಮೂಲಕ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ಏರ್ ಲಿಫ್ಟ್‌ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅವರು ಸಾವನ್ನಪ್ಪಿದ್ದಾರೆ.

ಪಂಡಿತ್ ಸುಖ್ ರಾಮ್ 1993 ರಿಂದ 1996ರ ತನಕ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ರಾಜಕೀಯ ಐದು ಬಾರಿ ವಿಧಾನಸಭೆ ಚುನಾವಣೆ, ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಂಡಿತ್ ಸುಖ್ ರಾಮ್ ಗೆಲುವು ಸಾಧಿಸಿದ್ದರು. ಪಂಡಿತ್ ಸುಖ್ ರಾಮ್ ಪುತ್ರ ಅನಿಲ್ ಶರ್ಮಾ ಮಂಡಿಯ ಬಿಜೆಪಿಯ ಶಾಸಕರು.

ಹಿಂದಿನ ಲೇಖನವರ್ಗಾವಣೆಯಾದ 38 ಇನ್ಸ್ ಪೆಕ್ಟರ್ ಕರ್ತವ್ಯಕ್ಕೆ ಗೈರು ಹಾಜರಿ: ನೋಟಿಸ್ ಜಾರಿ
ಮುಂದಿನ ಲೇಖನಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಕರ್ನಾಟಕದಲ್ಲೇ ಹೆಚ್ಚು: ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆಯಿಂದ ಬಹಿರಂಗ