ಮನೆ ರಾಜ್ಯ ವರ್ಗಾವಣೆಯಾದ 38 ಇನ್ಸ್ ಪೆಕ್ಟರ್ ಕರ್ತವ್ಯಕ್ಕೆ ಗೈರು ಹಾಜರಿ: ನೋಟಿಸ್ ಜಾರಿ

ವರ್ಗಾವಣೆಯಾದ 38 ಇನ್ಸ್ ಪೆಕ್ಟರ್ ಕರ್ತವ್ಯಕ್ಕೆ ಗೈರು ಹಾಜರಿ: ನೋಟಿಸ್ ಜಾರಿ

0

ಬೆಂಗಳೂರು(Bengaluru): ವರ್ಗಾವಣೆಗೊಂಡರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 38 ಇನ್ಸ್​ಪೆಕ್ಟರ್‌ಗಳಿಗೆ ಡಿಜಿ-ಐಜಿಪಿ ಕಚೇರಿಯಿಂದ ನೋಟಿಸ್ ನೀಡಲಾಗಿದ್ದು, ಏಳು ದಿನಗಳೊಳಗೆ ಉತ್ತರ ನೀಡುವಂತೆ ಖಡಕ್​ ಎಚ್ಚರಿಕೆ ಕೊಡಲಾಗಿದೆ.

ಸಂಬಂಧಿಸಿದ ಘಟಕಾಧಿಕಾರಿಗಳು ನಿಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಆದರೂ ಸಹ ನೀವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇದುವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಮೂಲಕ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿದ್ದೀರಿ. ಹೀಗಾಗಿ ಕೂಡಲೇ ನೀವು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

ಒಂದು ವೇಳೆ ನೀವು ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮಿಂದಾದ ತಪ್ಪಿನ ಬಗ್ಗೆ ವಿವರಣೆ ಸಲ್ಲಿಸಲು ಈ ಅವಕಾಶ ನೀಡಲಾಗಿದೆ. ಸೂಚನಾ ಪತ್ರ ತಲುಪಿದ 7 ದಿನದೊಳಗಾಗಿ ಸಮಜಾಯಿಷಿ ಸಲ್ಲಿಸತಕ್ಕದ್ದು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ.

ಹಿಂದಿನ ಲೇಖನಪಂಜಾಬ್‌ ಗುಪ್ತಚರ ಇಲಾಖೆ ಮೇಲೆ ದಾಳಿ: ಹೊಣೆ ಹೊತ್ತುಕೊಂಡ ಖಲಿಸ್ತಾನಿ ಉಗ್ರ ಸಂಘಟನೆ
ಮುಂದಿನ ಲೇಖನಕಾಂಗ್ರೆಸ್ ಹಿರಿಯ ನಾಯಕ ಪಂಡಿತ್ ಸುಖ್‌ ರಾಮ್  ವಿಧಿವಶ