ಮನೆ ಆರೋಗ್ಯ ದೇಶದಲ್ಲಿ ೧೩ ಸಾವಿರ ಕೋವಿಡ್ ಸೋಂಕಿತರು ಪತ್ತೆ

ದೇಶದಲ್ಲಿ ೧೩ ಸಾವಿರ ಕೋವಿಡ್ ಸೋಂಕಿತರು ಪತ್ತೆ

0

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದು, ಕಳೆದ ೨೪ ಗಂಟೆಗಳಲ್ಲಿ ೧೩,೧೬೬ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ೩೦೨ ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ.
ದಿನವೊಂದಕ್ಕೆ ಸೋಂಕು ಕಾಣಿಸುವವರ ಪ್ರಮಾಣ ಶೇಕಡಾ ೧.೨೮ರಷ್ಟಿದ್ದು, ಈಗ ದೇಶದಲ್ಲಿ ಒಟ್ಟು ೧,೩೪,೨೩೫ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಈವರೆಗೆ ಕಾಣಿಸಿಕೊಂಡಿರುವ ಒಟ್ಟು ಸೋಂಕಿತರಲ್ಲಿ ಶೇಕಡಾ ೦.೩೧ರಷ್ಟು ಮಂದಿ ಸಕ್ರಿಯ ಸೋಂಕಿತರಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ೨೪ ಗಂಟೆಯಲ್ಲಿ ೨೬,೯೮೮ ಮಂದಿ ಕೋವಿಡ್‌ನಿಂದ ಚೇತರಿಕೆ ಕಂಡಿದ್ದಾರೆ. ಈವರೆಗೆ ಒಟ್ಟು ೪,೨೨,೪೬,೮೮೪ ಮಂದಿ ಸೋಂಕಿನಿAದ ಗುಣಮುಖರಾಗಿದ್ದಾರೆ. ಅಂದರೆ ಕೋವಿಡ್ ಸೋಂಕಿನಿAದ ಗುಣಮುಖರಾಗಿರುವವರ ಪ್ರಮಾಣ ಶೇಕಡಾ ೯೮.೪೯ರಷ್ಟಿದೆ.
ಕೋವಿಡ್‌ನಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ೫,೧೩,೨೨೬ ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರಲ್ಲಿ ಸೋಂಕಿಗೆ ಬಲಿಯಾದವರ ಪ್ರಮಾಣ ಶೇಕಡಾ ೧.೨೦ರಷ್ಟಿದೆ.
ಈವರೆಗೆ ಸುಮಾರು ೭೬,೩೫,೬೯,೧೬೫ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಗುರುವಾರ ಒಂದೇ ದಿನ ೧೧,೫೫,೧೪೭ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಈವರೆಗೆ ಸುಮಾರು ೧,೭೬,೮೬,೮೯,೨೬೬ ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.

ಹಿಂದಿನ ಲೇಖನಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ರಷ್ಯಾ ವಶ
ಮುಂದಿನ ಲೇಖನಈ ದಿನದ ನಿಮ್ಮ ರಾಶಿ ಭವಿಷ್ಯ