ಮನೆ ಆರೋಗ್ಯ ದೇಶದಲ್ಲಿಇಳಿಮುಖವಾಗುತ್ತಿರುವ ಕೊರೊನಾ ಸೋಂಕಿನ ಪ್ರಮಾಣ

ದೇಶದಲ್ಲಿಇಳಿಮುಖವಾಗುತ್ತಿರುವ ಕೊರೊನಾ ಸೋಂಕಿನ ಪ್ರಮಾಣ

0

ನವದೆಹಲಿಭಾರತದಲ್ಲಿ ಕ್ರಮೇಣ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 27,409 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು  ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ಕೋವಿಡ್ ನಿಂದಾಗಿ 347 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 5,09,358ಕ್ಕೆ ಏರಿಕೆಯಾಗಿದೆ.

ಸೋಂಕು ಸಕಾರಾತ್ಮಕ ದರ ಶೇ.2.23ಕ್ಕೆ ಕುಸಿದಿದೆ. 24 ಗಂಟೆಗಳಲ್ಲಿ ದೇಶಾದ್ಯಂತ 82,817 ಮಂದಿ ಸೋಂಕಿತರು ಗುಣಮುಖರಾಗಿದ್ದು ಆ ಮೂಲಕ ಗುಣಮುಖರ ಪ್ರಮಾಣ 4,17,60,458ಕ್ಕೇರಿದೆ. 

ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,23,127ಕ್ಕೆ ಇಳಿಕೆಯಾಗಿದೆ. ಅಂತೆಯೇ ದೇಶದಲ್ಲಿನ ಕೋವಿಡ್ ಲಸಿಕೆ ವಿತರಣೆ ಪ್ರಮಾಣ 173.42 ಕೋಟಿ ಡೋಸ್ ಗೇರಿದೆ.

ಹಿಂದಿನ ಲೇಖನನಾನು ಮುಖ್ಯಮಂತ್ರಿ, ಭಯೋತ್ಪಾದಕನಲ್ಲ: ಪ್ರಧಾನಿ ವಿರುದ್ಧ ಪಂಜಾಬ್ ಸಿಎಂ ಚನ್ನಿ ಕಿಡಿ
ಮುಂದಿನ ಲೇಖನ7 ರಾಜ್ಯಗಳಲ್ಲಿ 14 ವಿವಾಹ: ವ್ಯಕ್ತಿಯ ಬಂಧನ