ಮನೆ ರಾಜಕೀಯ ನಾನು ಮುಖ್ಯಮಂತ್ರಿ, ಭಯೋತ್ಪಾದಕನಲ್ಲ: ಪ್ರಧಾನಿ ವಿರುದ್ಧ ಪಂಜಾಬ್ ಸಿಎಂ ಚನ್ನಿ ಕಿಡಿ

ನಾನು ಮುಖ್ಯಮಂತ್ರಿ, ಭಯೋತ್ಪಾದಕನಲ್ಲ: ಪ್ರಧಾನಿ ವಿರುದ್ಧ ಪಂಜಾಬ್ ಸಿಎಂ ಚನ್ನಿ ಕಿಡಿ

0

ಚಂಡೀಗಡ: “ಚರಣ್‌ಜಿತ್ ಸಿಂಗ್ ಚನ್ನಿ ಒಬ್ಬ ಮುಖ್ಯಮಂತ್ರಿ, ಆತ ಭಯೋತ್ಪಾದಕನಲ್ಲ. ಹೋಷಿಯಾರ್ಪುರಕ್ಕೆ ತೆರಳದಂತೆ ನೀವು ಆತನನ್ನು ತಡೆದಿದ್ದೀರಿ. ಇದು ಸರಿಯಾದ ಕ್ರಮವಲ್ಲ” ಎಂದು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಕಿಡಿಕಾರಿದ್ದಾರೆ.

ಚಂಡೀಗಡದಿಂದ ಹೋಷಿಯಾರ್ಪುರಕ್ಕೆ ರಾಹುಲ್ ಗಾಂಧಿ ಸಮಾವೇಶಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದ ಚನ್ನಿ ಅವರು ಚಂಡೀಗಡದ ಹೆಲಿಪ್ಯಾಡ್‌ಗೆ ಮರಳುವಂತೆ ಆಗಿತ್ತು. “ನಾನು ಬೆಳಿಗ್ಗೆ 11 ಗಂಟೆಗೆ ಉನಾದಲ್ಲಿ ಇದ್ದೆ. ಪ್ರಧಾನಿ ಮೋದಿ ಓಡಾಟದ ಕಾರಣ ಇದ್ದಕ್ಕಿದ್ದಂತೆ ಹೋಷಿಯಾರ್ಪುರಕ್ಕೆ ತೆರಳುವ ಅನುಮತಿಯನ್ನು ನಿರಾಕರಿಸಲಾಯಿತು. ಇದರಿಂದ ಹೋಷಿಯಾರ್ಪುರದಲ್ಲಿ ನಡೆಯುತ್ತಿದ್ದ ರಾಹುಲ್ ಗಾಂಧಿ ಸಮಾವೇಶಕ್ಕೆ ಹಾಜರಾಗಲು ನನಗೆ ಸಾಧ್ಯವಾಗಲಿಲ್ಲ. ನನಗೆ ಅಲ್ಲಿ ಇಳಿಯಲು ಮೊದಲು ಅನುಮತಿ ಸಿಕ್ಕಿತ್ತು” ಎಂದು ಚನ್ನಿ ಹೇಳಿದ್ದಾರೆ.
ಪ್ರತ್ಯಾರೋಪ
ಜನವರಿಯಲ್ಲಿ ನಡೆದ ಭದ್ರತಾ ಲೋಪ ಘಟನೆ ಬಳಿಕ ಮೊದಲ ಬಾರಿಗೆ ಪಂಜಾಬ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಜಲಂಧರ್‌ನಲ್ಲಿ ಸೋಮವಾರ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರಣದಿಂದ ತಮಗೂ ಇಂತಹ ಅನುಭವ ಹಿಂದೆ ಆಗಿತ್ತು ಎಂದು ಆರೋಪಿಸಿದ್ದರು.
‘ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ನಾನು 2014ರಲ್ಲಿ ಪಂಜಾಬ್‌ಗೆ ಆಗಮಿಸಿದ್ದೆ. ಪಠಾಣ್‌ಕೋಟ್ ಮತ್ತು ಹಿಮಾಚಲದಲ್ಲಿ ಪ್ರಚಾರ ನಡೆಸಲು ತೆರಳಬೇಕಿತ್ತು. ಇದೇ ವೇಳೆ ಕಾಂಗ್ರೆಸ್‌ ‘ಯುವ ರಾಜ’ ರಾಹುಲ್‌ ಗಾಂಧಿ ಅವರೂ ಅಮೃತಸರಕ್ಕೆ ಭೇಟಿ ನೀಡಿದ್ದರು. ಅವರ ಹೆಲಿಕಾಪ್ಟರ್‌ ಹಾರಾಟದ ಕಾರಣಕ್ಕಾಗಿ ನಾನು ಸಂಚರಿಸಬೇಕಿದ್ದ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಪ್ರತಿಪಕ್ಷಗಳ ಕಾರ್ಯಕ್ಕೆ ಅಡ್ಡಿಪಡಿಸುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ’ ಎಂದು ಟೀಕಿಸಿದ್ದಾರೆ.

ಹಿಂದಿನ ಲೇಖನರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನದೇಶದಲ್ಲಿಇಳಿಮುಖವಾಗುತ್ತಿರುವ ಕೊರೊನಾ ಸೋಂಕಿನ ಪ್ರಮಾಣ