ಮನೆ ಸ್ಥಳೀಯ ಮೈಸೂರಿನ ಪೂರ್ವ ಆರ್ ಟಿಓ ದಲ್ಲಿ ಭ್ರಷ್ಟಾಚಾರ: ಸೂಕ್ತ ತನಿಖೆಗೆ ಒತ್ತಾಯ

ಮೈಸೂರಿನ ಪೂರ್ವ ಆರ್ ಟಿಓ ದಲ್ಲಿ ಭ್ರಷ್ಟಾಚಾರ: ಸೂಕ್ತ ತನಿಖೆಗೆ ಒತ್ತಾಯ

0

ಮೈಸೂರು: ಮೈಸೂರಿನ ಪಶ್ಚಿಮ ಆರ್ ಟಿಓ ದಲ್ಲಿ  ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಈಗಾಗಲೇ 35 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬೆನ್ನಲ್ಲೇ ಪೂರ್ವ ಪಶ್ಚಿಮ ಆರ್ ಟಿಓ ದಲ್ಲಿ ಕೂಡ ಭ್ರಷ್ಟಚಾರ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಪೂರ್ವ ಆರ್ ಟಿ ಓ ಕಚೇರಿ ಅಧಿಕಾರಿಗಳಾದ ಶಫೀಯುದ್ದೀನ್ ಖಾನ್ ಅವರು ಹಣದಾಸೆಗೆ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಸಾರ್ವಜನಿಕರು ಪತ್ರಿಕೆ ಕಚೇರಿಗೆ ದೂರು ಬರೆದಿದ್ದಾರೆ.

ಒಂದು ದಿನಕ್ಕೆ 150-200 ಡಿಎಲ್ ಮಾಡಿಕೊಡಲು ಅವಕಾಶವಿದ್ದು, ಇದನ್ನು 1 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಆಟೋ ಮ್ಯಾಟಿಕ್ ಟೆಸ್ಟ್ ಟ್ರ್ಯಾಕ್ ನಲ್ಲಿ ಸಿಸಿ ಕ್ಯಾಮೆರಾ ಸೆನ್ಸಾರ್ ಹಾಗೂ ಇನ್ನು ಹಲವು ಯಂತ್ರಗಳನ್ನು ನಿಷ್ಕ್ರಿಯಗೊಳಿಸಿದ್ದಾರೆಂದು  ದೂರಿನಲ್ಲಿ ತಿಳಿಸಲಾಗಿದೆ.

ಆಟೋ ಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಯಂತ್ರಕ್ಕೆ ವೆಹಿಕಲ್ ಫಿಟ್ ನೆಸ್ ಯಂತ್ರಕ್ಕೆ ಸರ್ಕಾರ ಕೋಟ್ಯಾಂತರ ರೂ.ಖರ್ಚು ಮಾಡಿದರೆ ಆದರೆ ಪೂರ್ವ ಆರ್ ಟಿ ಓ ಅಧಿಕಾರಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪೂರ್ವ ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಾತ್ರವಲ್ಲದೇ  ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಲೋಕಾಯುಕ್ತ, ಮೈಸೂರು ಜಿಲ್ಲಾಧಿಕಾರಿಗಳು, ಸೂಪರಿಡೆಂಟ್ ಆಫ್ ಪೊಲೀಸ್ ಲೋಕಾಯುಕ್ತ, ಜಂಟಿ ಸಾರಿಗೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರಿಗೆ ಕೂಡ ದೂರು ನೀಡಿದ್ದಾರೆ.

ಹಿಂದಿನ ಲೇಖನ6ನೇ ದಿನದ ಕಲೆಕ್ಷನ್’ನೊಂದಿಗೆ ಜವಾನ್ ಚಿತ್ರ ವಿಶ್ವಾದ್ಯಂತ 600 ಕೋಟಿ ರೂ. ಸಮೀಪಿಸಲಿದೆ
ಮುಂದಿನ ಲೇಖನಬೆಂಗಳೂರಿನ ಭಾಗದಲ್ಲಿ ಸುಮಲತಾ ಸ್ಪರ್ಧೆಗೆ ಅವಕಾಶ: ಕೆ.ಟಿ.ಶ್ರೀಕಂಠೇಗೌಡ