ಮನೆ ರಾಜ್ಯ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರದಿಂದ ವರ್ಗಾವಣೆ ಉದ್ಯಮವಾಗಿದೆ – ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರದಿಂದ ವರ್ಗಾವಣೆ ಉದ್ಯಮವಾಗಿದೆ – ಬಸವರಾಜ ಬೊಮ್ಮಾಯಿ

0

ದಾವಣಗೆರೆ : ರಾಜ್ಯದಲ್ಲಿ ಒಂದು ರೀತಿಯಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿದ್ದರು. ನಂತರ ಹಾಲಿನ ದರ, ಎರಡು ಬಾರಿ ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಮೂರು ವರ್ಷದಲ್ಲಿ 60 ಸಾವಿರ ಕೋಟಿ ರೂ. ಹೊಸ ತೆರಿಗೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಸುಮಾರು 5 ಲಕ್ಷ ಕೋಟಿ ಹೊಸ ಸಾಲ ಮಾಡಿ, ದಾಖಲೆ ಸಾಲಗಾರ ಸಿದ್ದರಾಮಯ್ಯ ಎಂದು ಹೆಸರು ಪಡೆದುಕೊಂಡಿದ್ದಾರೆ. ಎಲ್ಲ ಇಲಾಖೆಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಯಾವುದೇ ಹಳ್ಳಿಯಲ್ಲಿ ನೋಂದಣಿ ಮಾಡಬೇಕೆಂದರೆ ಲಂಚದ ಹಣ ಬೆಂಗಳೂರಿಗೆ ಮುಟ್ಟಬೇಕು. ಇಲ್ಲದಿದ್ದರೆ ನೋಂದಣಿ ಆಗುವುದಿಲ್ಲ. ದೂರದ ಹಳ್ಳಿಯಲ್ಲಿ ಒಂದು ಎಕರೆ ಚೇಂಜ್ ಆಫ್ ಲ್ಯಾಂಡ್‌ ಗೆ 10 ಲಕ್ಷ ರೂ. ನಿಗದಿ ಮಾಡಿದ್ದಾರೆ. ಇವರು ಕೊಡುವಂತಹ ಅಕ್ಕಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರೇಷನ್ ಅಂಗಡಿಯವರೂ ದೂರು ದಾಖಲಿಸಿದ್ದಾರೆ.

ಪ್ರತಿ ತಿಂಗಳು ಎಷ್ಟು ಕಡಿಮೆ ಅಕ್ಕಿ ಹಂಚಿಕೆ ಮಾಡುತ್ತೇವೆ ಅಷ್ಟು ರಾಜ್ಯ ಸರ್ಕಾರಕ್ಕೆ ಅನುಕೂಲ ಆಗುತ್ತದೆ ಎನ್ನುತ್ತಾರೆ. ಆಸ್ಪತ್ರೆಯಲ್ಲಿ, ಮಂತ್ರಿಗಳ ಕಚೇರಿ, ಸಿಎಂ ಕಚೇರಿಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ವರ್ಗಾವಣೆ ಉದ್ಯಮವಾಗಿ ಮಾರ್ಪಾಡಾಗಿದೆ. ಯಾವುದೇ ಅಧಿಕಾರಿ ಎಷ್ಟೇ ದುಡ್ಡು ಕೊಟ್ಟು ಬಂದರೂ ಎಷ್ಟು ದಿನ ಇರುತ್ತಾನೆ ಎನ್ನುವ ನಂಬಿಕೆ ಇಲ್ಲ. ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಜನರ ಮೇಲೆ ಭ್ರಷ್ಟಾಚಾರದ ಹೊರೆ ಹಾಕುತ್ತಾರೆ. ಒಂದು ಎಲೆಕ್ನಿಕ್ ಕಂಪನಿ 8000 ಎಲೆಕ್ನಿಕ್ ಮೀಟರ್‌ಗೆ ಚಾರ್ಜ್ ಮಾಡಿದರೆ ಅದರಲ್ಲಿ 6 ಸಾವಿರ ರೂ. ಭ್ರಷ್ಟಾಚಾರ ಇದೆ ಎಂದು ವಾಗ್ದಾಳಿ ನಡೆಸಿದರು.