ಮನೆ ಕಾನೂನು ಎಐಎಡಿಎಂಕೆಯಿಂದ ಉಚ್ಚಾಟನೆ: ವಿಕೆ ಶಶಿಕಲಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಎಐಎಡಿಎಂಕೆಯಿಂದ ಉಚ್ಚಾಟನೆ: ವಿಕೆ ಶಶಿಕಲಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

0

ಚೆನ್ನೈ: 2017ರಲ್ಲಿ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾ ಅವರನ್ನು ಪದಚ್ಯುತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನಗರದ ನ್ಯಾಯಾಲಯ ಇಂದು ವಜಾಗೊಳಿಸಿದೆ.

ಎಐಎಡಿಎಂಕೆ ಸಂಯೋಜಕ ಓ ಪನ್ನೀರಸೆಲ್ವಂ ಮತ್ತು ಜಂಟಿ ಸಂಯೋಜಕ ಕೆ ಪಳನಿಸ್ವಾಮಿ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯ ನಂತರ ನ್ಯಾಯಾಲಯವು ವಿಕೆ ಶಶಿಕಲಾ ಮನವಿಯನ್ನು ವಜಾಗೊಳಿಸಿದೆ ಎಂದು ಪಕ್ಷದ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಎ ಎಂ ಬಾಬು ಮುರುಗಾವೆಲ್ ತಿಳಿಸಿದ್ದಾರೆ.

2017ರಲ್ಲಿ ನಡೆದ ಎಐಎಡಿಎಂಕೆ ಜನರಲ್ ಕೌನ್ಸಿಲ್ ತನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟನೆ ಮಾಡಿದ್ದು ಮಾನ್ಯವಲ್ಲ ಎಂದು ಶಶಿಕಲಾ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.

ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಮರಣದ ನಂತರ ಶಶಿಕಲಾ ಅವರು ಡಿಸೆಂಬರ್ 2016 ರಲ್ಲಿ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಫೆಬ್ರವರಿ 2017ರಲ್ಲಿ, ಆಗಿನ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ವಿರುದ್ಧ ಬಂಡಾಯವೆದ್ದರು. ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು ಎಂದು ಹೇಳಿದರು.

ಇದು ಎಐಎಡಿಎಂಕೆಯಲ್ಲಿ ವಿಭಜನೆಗೆ ಕಾರಣವಾಯಿತು. ಒಂದು ಬಣ ಒಪಿಎಸ್ ಮತ್ತು ಇನ್ನೊಂದು ಬಣವನ್ನು ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವ ವಹಿಸಿದ್ದರು  ನಂತರ ಮುಖ್ಯಮಂತ್ರಿಯಾದರು.