ಮನೆ ರಾಜ್ಯ ಕೊರೊನಾ 4ನೇ ಅಲೆ ಭೀತಿ: ವಿಮಾನ ನಿಲ್ದಾಣ, ಗಡಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ; ಸಿಎಂ ಬೊಮ್ಮಾಯಿ ಸುಳಿವು

ಕೊರೊನಾ 4ನೇ ಅಲೆ ಭೀತಿ: ವಿಮಾನ ನಿಲ್ದಾಣ, ಗಡಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ; ಸಿಎಂ ಬೊಮ್ಮಾಯಿ ಸುಳಿವು

0

ವಿಜಯಪುರ(Vijayapura)-ಕೊರೊನಾ ನಾಲ್ಕನೇ ಅಲೆಯ (Corona 4th wave) ಭೀತಿಯ ಮಧ್ಯೆ ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸುವ ಸುಳಿವನ್ನು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಅವರು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಲಹೆಯನ್ನು ಆಧರಿಸಿ ರಾಜ್ಯದ ವಿಮಾನ ನಿಲ್ದಾಣಗಳು, ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಮತ್ತು ಕಣ್ಗಾವಲು ಕ್ರಮಗಳನ್ನು ಮತ್ತೆ ಜಾರಿಗೊಳಿಸಬಹುದು ಎಂದಿದ್ದಾರೆ.

ಹಿಂದಿನ ಮೂರು ಅಲೆಗಳ ಸಮಯದಲ್ಲಿ ನೆರೆಯ ಮಹಾರಾಷ್ಟ್ರ ಮತ್ತು ಕೇರಳದ ಜನರು ಕೋವಿಡ್ ಆತಂಕಕ್ಕೆ ಕಾರಣರಾಗಿದ್ದರು. ಆದ್ದರಿಂದ, ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಅವರ ಸಭೆಯ ನಂತರ ಕೇಂದ್ರದ ಸಲಹೆಯನ್ನು ಆಧರಿಸಿ, ರಾಜ್ಯದ ವಿಮಾನ ನಿಲ್ದಾಣಗಳು, ಗಡಿ ಜಿಲ್ಲೆಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರ, ಕೇರಳ ಗಡಿಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಮತ್ತು ಕಣ್ಗಾವಲು ಕ್ರಮಗಳನ್ನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು.

ಕೊರೊನಾ ಹರಡುವುದನ್ನು ತಡೆಯಲು ಜನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಮನವಿ ಮಾಡಿದ ಬೊಮ್ಮಾಯಿ ಅವರು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗದ ಕಾರಣ ಆತಂಕ ಪಡುವ ಅಗತ್ಯವಿಲ್ಲ, ಆದರೂ ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.