ಮನೆ ಆರೋಗ್ಯ ದೇಶದಲ್ಲಿಂದು 2503 ಕೋವಿಡ್ ಪ್ರಕರಣ ಪತ್ತೆ

ದೇಶದಲ್ಲಿಂದು 2503 ಕೋವಿಡ್ ಪ್ರಕರಣ ಪತ್ತೆ

0

ನವದೆಹಲಿ: ಭಾರತದಲ್ಲಿ ಇಂದು 2,503 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ 24 ಗಂಟೆಗಳಲ್ಲಿ 4,377 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 36,168 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈ ವರೆಗೆ 4,24,41,449 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.ಕೋವಿಡ್‌ನಿಂದಾಗಿ ಸದ್ಯ ದೇಶದಲ್ಲಿ 5,15,877 ಮಂದಿ ಮೃತಪಟ್ಟಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ 0.47 ರಷ್ಟಿದೆ.ಇನ್ನೊಂದೆಡೆ, ದೇಶದಲ್ಲಿ ಈ ವರೆಗೆ 1,79,91,57,486 ಡೋಸ್‌ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.