ಮನೆ ಅಪರಾಧ ಲಾರಿಗೆ ಟೆಂಪೋ ಡಿಕ್ಕಿ: ಇಬ್ಬರ ಸಾವು

ಲಾರಿಗೆ ಟೆಂಪೋ ಡಿಕ್ಕಿ: ಇಬ್ಬರ ಸಾವು

0

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ  ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಮೃತರಲ್ಲಿ ಒಬ್ಬರನ್ನು ಶ್ವೇತಾ (24) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಹತ್ತು ಜನರು ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಟೆಂಪೊ ಗೋಕರ್ಣದಿಂದ ಬೆಂಗಳೂರು ಕಡೆ ಸಾಗುವಾಗ ಈ ಅವಘಡ ಸಂಭವಿಸಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’

ಹಿಂದಿನ ಲೇಖನದೇಶದಲ್ಲಿಂದು 2503 ಕೋವಿಡ್ ಪ್ರಕರಣ ಪತ್ತೆ
ಮುಂದಿನ ಲೇಖನಕೆನಡಾದಲ್ಲಿ ಭೀಕರ ಆಟೋ ಅಪಘಾತ:  ಐವರು ಭಾರತೀಯರ ಸಾವು