ಮನೆ ರಾಜಕೀಯ ಜನವರಿ ಅಂತ್ಯದವರೆಗೆ ಕೋವಿಡ್ ಮಾರ್ಗಸೂಚಿ ಮುಂದುವರಿಕೆ: ಸಚಿವ ಡಾ.ಕೆ.ಸುಧಾಕರ್

ಜನವರಿ ಅಂತ್ಯದವರೆಗೆ ಕೋವಿಡ್ ಮಾರ್ಗಸೂಚಿ ಮುಂದುವರಿಕೆ: ಸಚಿವ ಡಾ.ಕೆ.ಸುಧಾಕರ್

0

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ(Corona) ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ,ಸುಧಾಕರ್ (Dr.K.Sudhakar) ಮಾಹಿತಿ ನೀಡಲಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾದ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕಟ್ಟುನಿಟ್ಟಿನ ಕೋವಿಡ್ ರೂಲ್ಸ್ ಮುಂದುವರೆಯಲಿದೆ.  ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೇ ಹೇಳಿದ್ದಾರೆ.  ಕೊರೋನಾ ನಿಯಂತ್ರಿಸಲು ಜನರ ಸಹಕಾರ ಅತ್ಯಗತ್ಯ. ಕೊರೊನಾ ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷಿಸಬೇಡಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.  ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುವವರು  ಪಡೆಯಿರಿ.  2ನೇ ಡೋಸ್ ಪಡೆಯದವರು ಆದಷ್ಟು ಬೇಗ ಪಡೆಯಿರಿ  ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ. ಲಾಕ್ ಡೌನ್ ಮೂಲಕ ಕೊರೋನಾ ನಿಯಂತ್ರಿಸುವುದು ಸರಿಯಲ್ಲ  ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಅನಗತ್ಯವಾಗಿ ಸಭೆ ಸಮಾರಂಭ ಬೇಡ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ ಇದನ್ನೇ ಹೇಳಿದ್ದಾರೆ. ಕೇಸ್ ಹೆಚ್ಚಿರೋ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

ಹಿಂದಿನ ಲೇಖನಫೆ. 22 ರಂದು ಮೈವಿವಿಯ 3, 5ನೇ ಸೆಮಿಸ್ಟರ್ ಹಾಗೂ ಹಳೆಯ ವಿದ್ಯಾರ್ಥಿಗಳ 1,3ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ
ಮುಂದಿನ ಲೇಖನಕೊರೋನಾ: ಇಂದು 2.64 ಲಕ್ಷ ಹೊಸ ಪತ್ತೆ