ಮನೆ ರಾಜ್ಯ ಮಡಿಕೇರಿ ದಸರಾದಲ್ಲಿ ಗೋಮಾತೆ ಮಹಿಮೆ ಸಾರುವ ಮಂಟಪ

ಮಡಿಕೇರಿ ದಸರಾದಲ್ಲಿ ಗೋಮಾತೆ ಮಹಿಮೆ ಸಾರುವ ಮಂಟಪ

0

ಮಡಿಕೇರಿ(Madikeri): ಈ ಬಾರಿ ದಸರಾ ದಶಮಂಟಪೋತ್ಸದಲ್ಲಿ ಗೋಮಾತೆಯ ಮಹಿಮೆಯನ್ನು ಸಾರುವಂತಹ ಮಂಟಪವೊಂದು ಕಂಚಿ ಕಾಮಾಕ್ಷಮ್ಮ ದೇಗುಲದಲ್ಲಿ ಸಿದ್ಧವಾಗುತ್ತಿದೆ.

ತನ್ನ 59ನೇ ವರ್ಷದ ಮಂಟಪೋತ್ಸವ ಪ್ರಯುಕ್ತ ಅದ್ದೂರಿಯಾಗಿಯೇ ಮಂಪಟವನ್ನು ಸಿದ್ಧಗೊಳಿಸಲಾಗುತ್ತಿದೆ. ಗೋಮಾತೆಯ ಮಹಿಮೆಯನ್ನು 20 ನಿಮಿಷಗಳ ಕಾಲ ಸಮರ್ಥವಾಗಿ ಅಭಿವ್ಯಕ್ತಿಸುವಂತೆ ಈ ಮಂಟಪ ಅಣಿಗೊಳಿಸಲಾಗುತ್ತಿದೆ.

ಕೇರಳದಿಂದ ಸ್ಟುಡಿಯೊ ವಿನ್ಯಾಸ, ಸೌಂಡ್‌ ಸಿಸ್ಟಂ ತರಲಾಗಿದೆ. ಗೋಮಾತೆಯ ಜತೆಗೆ ನಂದಿ, ಶಿವ ಮೊದಲಾದ 18 ಮೂರ್ತಿಗಳು ಇರಲಿವೆ ಎಂದು ಮುತ್ತುಮಾರಿಯಮ್ಮ ಬಾಲಕ ಮಂಡಳಿಯ ಅಧ್ಯಕ್ಷರಲ್ಲಿ ಒಬ್ಬರಾದ ರಾಘವೇಂದ್ರ ತಿಳಿಸಿದ್ದಾರೆ.

ಮಂಡಳಿಗೆ ಬೌತಮ್‌ ಸುವರ್ಣ ಎಂಬುವವರೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಸ್ಥಳೀಯರಿಗೆ ಆದ್ಯತೆ ನೀಡಿದ ದಂಡಿನ ಮಾರಿಯಮ್ಮ ಸಮಿತಿ ಸತತ 92ನೇ ವರ್ಷಗಳಿಂದಲೂ ಮಂಟಪೋತ್ಸವದಲ್ಲಿ ಭಾಗಿಯಾಗುತ್ತಿರುವ ದಂಡಿನ ಮಾರಿಯಮ್ಮ ದೇಗುಲ ಸಮಿತಿಯು ಈ ಬಾರಿ ಮಂಟಪದ ವಿನ್ಯಾಸ, ರಚನೆ, ಬೆಳಕು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿದೆ.