ಮನೆ ಅಪರಾಧ ನಕಲಿ ದಾಖಲೆ ಸೃಷ್ಠಿಸಿ ಲೇಔಟ್ ನಿರ್ಮಾಣ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪತ್ನಿ ಎಲ್ ಕುಸುಮಾ ವಿರುದ್ಧ...

ನಕಲಿ ದಾಖಲೆ ಸೃಷ್ಠಿಸಿ ಲೇಔಟ್ ನಿರ್ಮಾಣ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪತ್ನಿ ಎಲ್ ಕುಸುಮಾ ವಿರುದ್ಧ ಎಂಪಿ, ಎಂಎಲ್‍ ಎ ವಿಶೇಷ ತ್ವರಿತ ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐ ಆರ್ ದಾಖಲು

0

ಮೈಸೂರು:  ನಕಲಿ ದಾಖಲೆಗಳನ್ನು ಸೃಷ್ಠಿಸಿ ಸರ್ಕಾರದ ದಾಸ್ತಾವೇಜುಗಳನ್ನ ನಕಲು ಮಾಡಿ ಲೇಔಟ್ ಪ್ಲಾನ್ ಹಾಗೂ ಕಂದಾಯದ ಸರ್ವೆ ಸ್ಕೆಚ್ ಗಳನ್ನು ತಯಾರಿಸಿ ಕೋಟ್ಯಾಂತರ ರೂ ಹಣವನ್ನು ಸಾರ್ವಜನಿಕರು ಹಾಗೂ ಸರ್ಕಾರಕ್ಕೆ ವಂಚಿಸುತ್ತಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಮತ್ತು ಅವರ ಪತ್ನಿ ಎಲ್ ಕುಸುಮಾ ಹಾಗೂ ಪಿಡಿಓ, ಮುಡಾ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಪ್ರಕರಣ ಕುರಿತು ಸಾಮಾಜಿಕ ಹೋರಾಟಗಾರ, RERA ಪ್ರ ಮಾಣೇಕೃತ  ಏಜೆಂಟ್  ಆದೀಶ್ ಸಾಗರ್ ಎಂ.ಡಿ ನೀಡಿದ ದೂರಿನ ಸಂಬಂಧ ಎಫ್ ಐ ಆರ್ ದಾಖಲಿಸುವಂತೆ 42ನೇ ಹೆಚ್ಚುವರಿ ಎಂಪಿ, ಎಂಎಲ್ ಎ ವಿಶೇಷ ತ್ವರಿತ ನ್ಯಾಯಾಲಯವು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಹಗರಣದ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಹಿನ್ನಲೆ ಎಫ್ ಐ ಆರ್ ದಾಖಲಿಸಲಾಗಿದೆ.

ದೂರಿನಲ್ಲೇನಿದೆ ?

ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಅವರು ತಮ್ಮ ಪತ್ನಿ ಎಲ್ ಕುಸುಮಾ ಹೆಸರಿನಲ್ಲಿ  ಮೈಸೂರು ತಾಲ್ಲೂಕಿನ ಜಯಪುರರ ಹೋಬಳಿಯ ಉದ್ಬೂರು ಗ್ರಾಮದ ಸರ್ವೆ ನಂ. 315ರಲ್ಲಿ 4 ಎಕರೆ 32 ಗುಂಟೆ, 317 ರಲ್ಲಿ 4 ಎಕರೆ 29 ಗುಂಟೆ ಒಟ್ಟು  9 ಎಕರೆ 21 ಗುಂಟೆ ಜಾಗವನ್ನು ಖರೀದಿ ಮಾಡಿರುತ್ತಾರೆ.

CamScanner 02-14-2024 14.03

ಸದರಿ ಜಾಗದಲ್ಲಿ ಅಕ್ರಮವಾಗಿ ಹಣ ಸಂಪಾದಿಸಲು ಕಾನೂನು ಬಾಹಿರ ಲೇಔಟ್ ನಿರ್ಮಾಣ ಮಾಡಲು ಮಾಲೀಕರೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಕೆಲವು ಮುಡಾ ಅಧಿಕಾರಿಗಳು, ಉದ್ಬೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಭೂಮಾಪಕರು ಮತ್ತು ಇನ್ನಿತರರು ಸೇರಿಕೊಂಡು ಒಳಸಂಚು ರೂಪಿಸಿ ಅಧಿಕಾರಿಗಳು ಶಾಮೀಲಾಗಿ ಅಪರಾಧಿಕ ಒಳ ಸಂಚು ರೂಪಿಸಿ ಜನರಿಗೆ ಮೋಸ, ವಂಚನೆ ಮಾಡಿ ಹಣ ಕಬಳಿಸುವ ದುರುದ್ದೇಶದಿಂದ ಸದರಿ ಲೇಔಟ್ ನಿರ್ಮಾಣ ಮಾಡಲು ನಕಲಿ ದಾಖಲೆಗಳನ್ನು ಸೃಷ್ಠಿಸಿ ಸರ್ಕಾರದ ದಾಸ್ತಾವೇಜುಗಳನ್ನ ನಕಲು ಮಾಡಿ ಲೇಔಟ್ ಪ್ಲಾನ್ ಹಾಗೂ ಸ್ಕೆಚ್ ಗಳನ್ನು ತಯಾರಿಸಿ ಕೋಟ್ಯಾಂತರ ರೂ ಹಣವನ್ನು ಸಾರ್ವಜನಿಕರು ಹಾಗೂ ಸರ್ಕಾರಕ್ಕೆ ವಂಚಿಸುತ್ತಿರುವುದರಿಂದ ಸದರಿ ಅಧಿಕಾರಿಗಳು ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ ?

ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು ತಮ್ಮ ಪತ್ನಿ ಎಲ್ ಕುಸುಮಾ ಹೆಸರಿನಲ್ಲಿ ಉದ್ಬೂರು ಗ್ರಾಮದ ಸರ್ವೆ ನಂ. 315 ರಲ್ಲಿ 9 ಎಕರೆ 21 ಗುಂಟೆ ಜಾಗವನ್ನು ತೆಗೆದುಕೊಂಡಿದ್ದು, ಅದನ್ನು ಕೃಷಿಯಿಂದ ವಸತಿ ಉದ್ದೇಶಕ್ಕೆ ಪರಿವರ್ತಿಸಿದ್ದಾರೆ. ಸದರಿ ಜಾಗವನ್ನು ಬಡಾವಣೆಯನ್ನಾಗಿ ಮಾರ್ಪಾಡಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಸೇಲ್ ಡೀಡ್ ಮತ್ತು ಪರಿವರ್ತನೆ ಆದೇಶದಲ್ಲಿ ಆದರೆ ಬಡಾವಣೆಗೆ ಯಾವುದೇ ಕಡೆಯಿಂದ ರಸ್ತೆ ಸೌಲಭ್ಯವಿರುವುದಿಲ್ಲ.  

ಬಳಿಕ  ಮುಡಾದಲ್ಲಿ ಬಡಾವಣೆ ನಕ್ಷೆ ಮಂಜೂರು ಮಾಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ರಸ್ತೆ ಸೌಲಭ್ಯವಿಲ್ಲದ ಕಾರಣ ಅವರ ಮನವಿಯಲ್ಲಿ ತಿರಸ್ಕರಿಸಿದ್ದಾರೆ. ನಂತರ ಪಶ್ಚಿಮ ಭಾಗದಿಂದ ಅಪ್ರೋಚ್ ರೋಡ್ ಇದೆ ಎಂದು ಎಂಬುದಾಗಿ ಸರ್ವೆ ಇಲಾಖೆಯ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಮುಡಾಗೆ ಸಲ್ಲಿಸಿದ್ದು, ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಮಹಜರ್ ಮಾಡದೇ ಬಡಾವಣೆ ನಕ್ಷೆಯನ್ನು ನೀಡಿರುತ್ತಾರೆ.

ಈ ಸಂಬಂಧ ದೂರುದಾರರಾದ ಸಾಮಾಜಿಕ ಹೋರಾಟಗಾರ ಆದೀಶ್ ಸಾಗರ್ ಎಂ.ಡಿ ಅವರು,  2023ರ ಡಿಸೆಂಬರ್ 21 ಮೈಸೂರು ನಗರ ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ದೂರನ್ನು ಸ್ವೀಕರಿಸಿದ ಪೊಲೀಸರು  ವಿಚಾರಣೆ ಮಾಡಿ ದಾಖಲೆಗಳು ಸರಿಯಾಗಿವೆ ಎಂದು ದೂರನ್ನು ಮುಚ್ಚಿದ್ದರು.

ಬಳಿಕ ದೂರುದಾರರು 42ನೇ ಹೆಚ್ಚುವರಿ ಎಂಪಿ, ಎಂಎಲ್ ಎ ವಿಶೇಷ ತ್ವರಿತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ನ್ಯಾಯಾಲಯವು  ಪ್ರಕರಣ ಸಂಬಂದ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಹಗರಣದ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಮಾತ್ರವಲ್ಲದೇ ಮುಂದಿನ 60 ದಿನದ ಒಳಗಾಗಿ ಪೂರ್ಣ ತನಿಖಾವರದಿಯನ್ನು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮುಂದಿನ ವಿಚಾರಣೆಯು ಏಪ್ರಿಲ್ 8 ರಂದು ನಡೆಯಲಿದೆ.

ಹಿಂದಿನ ಲೇಖನಫೆ.23ರಂದು “ಧೈರ್ಯಂ ಸರ್ವತ್ರ ಸಾಧನಂ’ ಚಿತ್ರ ತೆರೆಗೆ
ಮುಂದಿನ ಲೇಖನಸರ್ಕಾರ ತುಳಿತಕ್ಕೊಳಗಾದವರ ಪರವಾದರೆ ದಲಿತರ ಹಣ ಬೇರೆಡೆ ಬಳಸಿದ್ದೇಕೆ?: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ