ಮನೆ ರಾಜಕೀಯ ಸಿ.ಟಿ.ರವಿ ಬಹಳ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ

ಸಿ.ಟಿ.ರವಿ ಬಹಳ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ

0

ಶಿವಮೊಗ್ಗ: ಸಿ.ಟಿ.ರವಿ ಇದ್ದಾನಲ್ಲಾ ಅವನು ಬಹಳ ಕಮ್ಯುನಲ್ ಫೆಲೊ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

`ಕಾಂಗ್ರೆಸ್ ಸರ್ಕಾರ ಬಂದರೆ ಕೊಲೆ ಸುಲಿಗೆ ಜಾಸ್ತಿಯಾಗತ್ತೆ’ ಎಂಬ ಸಿ.ಟಿ. ರವಿ ಹೇಳಿಕೆಗೆ ಸಿದ್ದರಾಮಯ್ಯ ಮಂಗಳವಾರ ಪ್ರತಿಕ್ರಿಯಿಸಿ , ಸಿ ಟಿ ರವಿ ಅವರಿಗೆ ಜಾತ್ಯತೀತತೆಯು ಅರ್ಥವಾಗೊಲ್ಲ, ಸಂವಿಧಾನವೂ ಗೊತ್ತಿಲ್ಲ. ಹೀಗಾಗಿ ಅವನ ಹೇಳಿಕೆಗೆಲ್ಲಾ ನಾನು ಉತ್ತರ ಕೊಡಲ್ಲ ಎಂದರು.

ಶರಾವತಿ ಸಂತ್ರಸ್ತರ ಪರ ಸಮಾವೇಶ ಯಶಸ್ವಿಯಾಯ್ತು.. ಭಾರೀ ಜನ ಸೇರಿದ್ರು. ಸಚಿವ ಆರಗ ಜ್ಞಾನೇಂದ್ರ ಇಷ್ಟು ವರ್ಷದಿಂದ ಕಾಂಗ್ರೆಸ್ ನವರು ಏನು ಮಾಡ್ತಿದ್ರು ಎಂದು ಕೇಳ್ತಿದ್ದಾರೆ. 2008 ರಿಂದ 2013 ರವರೆಗೆ ಬಿಜೆಪಿ ಸರ್ಕಾರವೇ ಇತ್ತು ಅಲ್ವಾ ಏನು ಮಾಡಿದ್ರು? ಎಂದು ಪ್ರಶ್ನಿಸಿದರು.

ಕಳೆದ ಮೂರು ವರ್ಷದಿಂದ ಇವರೇ ಇದ್ದರಲ್ಲಾ…ಏನು ಮಾಡ್ತಾ ಇದ್ದಾರೆ. ಇದೇ ಜಿಲ್ಲೆಯ ಯಡಿಯೂರಪ್ಪ ಕೂಡ ಮುಖ್ಯಮಂತ್ರಿ ಅಗಿದ್ರಲ್ಲಾ… ಇದಕ್ಕೆ ಉತ್ತರ ಇದ್ಯಾ ಎಂದು ಸಿದ್ದರಾಮಯ್ಯ ಕೇಳಿದರು.

ಯಡಿಯೂರಪ್ಪ, ಈಶ್ವರಪ್ಪ ಇದೇ ಜಿಲ್ಲೆಯವರಲ್ವಾ? ಏನು ಮಾಡಿದ್ರು.. ನಾವು ಕೇಂದ್ರದ ಆನುಮತಿ ಬೇಡ ಎಂದು ತಿಳಿದು ಭೂಮಿ ಮಂಜೂರಾತಿ ಮಾಡಿದ್ವಿ. ಅರಣ್ಯ ಸಂರಕ್ಷಣಾ ಕಾಯ್ದೆ ಬರೋ ಮುಂಚೇನೆ ಭೂಮಿ ಕೊಡಲಾಗಿದೆ. ನರೇಂದ್ರ ಮೋದಿ ಪ್ರಧಾನಿ ಅಗಿ ಎಂಟು ವರ್ಷ ಆಯ್ತು. ಅರಣ್ಯ ಭೂಮಿ ಮಂಜೂರಾತಿಗೆ ಅನುಮತಿ ತಗೋಳೊಕೆ ಎಂಟು ವರ್ಷ ಬೇಕಾ? ಎಂದರು.