ಮನೆ ಮನರಂಜನೆ ಮೇ 17 ರಂದು “ದ ಸೂಟ್‌’  ಸಿನಿಮಾ ಬಿಡುಗಡೆ

ಮೇ 17 ರಂದು “ದ ಸೂಟ್‌’  ಸಿನಿಮಾ ಬಿಡುಗಡೆ

0

“ದ ಸೂಟ್‌’- ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಚಿತ್ರ ಮೇ 17 ಚಿತ್ರ ಬಿಡುಗಡೆಯಾಗುತ್ತಿದೆ. ಮಾಲತಿ ಗೌಡ ಹಾಗೂ ರಾಮಸ್ವಾಮಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಎಸ್‌.ಭಗತ್‌ ರಾಜ್‌ ನಿರ್ದೇಶಿಸಿದ್ದಾರೆ.

Join Our Whatsapp Group

ನಟ ಧ್ರುವ ಸರ್ಜಾ ಅವರು ಈ ಚಿತ್ರದ ಟ್ರೇಲರ್‌ ನೋಡಿ ಶುಭ ಕೋರಿದ್ದು, ಚಿತ್ರದ ಸಂಭ್ರಮ ಹೆಚ್ಚಿಸಿದೆ.

ನಿರ್ದೇಶಕ ಎಸ್‌.ಭಗತ್‌ ರಾಜ್‌ ಮಾತನಾಡಿ, “ನಾನು ಹಿರಿಯ ನಿರ್ದೇಶಕ ಕಾಶೀನಾಥ್‌ ಅವರ ಬಳಿ ನಿರ್ದೇಶನ ಕಲಿತಿದ್ದೇನೆ. ಅವರು ನನ್ನ ಗುರುಗಳು. ದ ಸೂಟ್‌ ನನ್ನ ಮೊದಲ ನಿರ್ದೇಶನದ ಚಿತ್ರ. ಸೂಟ್‌ ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕ. ಈ ವಿಷಯ ಕೇಳಿ ಆಶ್ಚರ್ಯಪಟ್ಟಿದ್ದು ಉಂಟು. ಆದರೆ ನಮ್ಮ ಚಿತ್ರದಲ್ಲಿ ಸೂಟ್‌ನ ಪಾತ್ರವೇನು ಎಂಬುದು ಮೇ 17 ರಂದು ತಿಳಿಯಲಿದೆ. ಸೂಟ್‌ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಸೂಟ್‌ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರಕ್ಕೆ ಅತಿಥಿ ದೇವೋಭವ ಎಂಬ ಅಡಿಬರಹವಿದೆ. ಸೂಟ್‌ ಚಿತ್ರದ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ. ಸೂಟ್‌ನ ಬಗ್ಗೆ ಅನೇಕ ಗಣ್ಯರು ತಮ್ನಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರದಲ್ಲಿ ಮೂರು ಕಿರಣಗಳಿದೆ. ಸಂಗೀತ ನಿರ್ದೇಶಕ ಕಿರಣ್‌ ಶಂಕರ್‌, ಛಾಯಾಗ್ರಾಹಕ ಕಿರಣ್‌ ಹಂಪಾಪುರ ಹಾಗೂ ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಜೀವ ತುಂಬಿರುವ ಕಿರಣ್‌ ಅವರು. ಈ ಚಿತ್ರದಲ್ಲಿ ಕಮಲ್, ಉಮೇಶ್‌ ಬಣಕಾರ್‌, ವಿ.ನಾಗೇಂದ್ರ ಪ್ರಸಾದ್‌, ಜೋಸೆಫ್, ಸುಜಯ್, ಭೀಷ್ಮ ರಾಮಯ್ಯ, ಗಡ್ಡ ವಿಜಿ, ಪ್ರಣಯ ಮೂರ್ತಿ ಸೇರಿದಂತೆ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ’ ಎಂದರು.

ನಟ ಸಲ್ಮಾನ್‌ ಖಾನ್‌ ಅವರಿಗೆ ಮ್ಯಾನೇಜರ್‌ ಆಗಿದ್ದ ನಟ ಕಮಲ್‌ ಅವರು ದ ಸೂಟ್‌ ಚಿತ್ರದ ತಮ್ಮ ಜರ್ನಿಯ ಬಗ್ಗೆ ವಿವರಣೆ ನೀಡಿದರು. ಕಲಾವಿದರಾದ ಮಂಜು ಪಾಟೀಲ್. ಸುಜಯ್, ಭೀಷ್ಮ ರಾಮಯ್ಯ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಹಿಂದಿನ ಲೇಖನಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ: ಪ್ರಧಾನಿ ಮೋದಿ
ಮುಂದಿನ ಲೇಖನದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಟಿಕೆಟ್ ಸಿಗುವ ವಿಶ್ವಾಸವಿದೆ-ಕೆಟಿಎಸ್