ಮೈಸೂರು(Mysuru): ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳಿಗೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ವೇವ್ ಬ್ರಿಡ್ಜ್ ನಲ್ಲಿ ಆನೆಗಳಿಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು.
ಈ ಬಾರಿಯೂ 5660 ಕೆ.ಜಿ ಹೊಂದಿರುವ ಅರ್ಜುನನೇ ಬಲಶಾಲಿಯಾಗಿದ್ದಾನೆ. ಹಾಗೂ ಕಾವೇರಿ 3100, ಕ್ಯಾಪ್ಟನ್ ಅಭಿಮನ್ಯು 4770, ಮಹೇಂದ್ರ 4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810, ಗೋಪಾಲಸ್ವಾಮಿ 5140 ತೂಕಗಳನ್ನು ಹೊಂದಿವೆ.
ಆನೆಗಳಿಗೆ ಅರಮನೆ ಒಳಗಡೆ ತಾಲೀಮು
ಆ.14 ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲಾ. ಆನೆಗಳನ್ನ ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.