ರಚನೆ : ಶ್ರೀ ನರಹರಿ ವಿಠ್ಠಲ ದಾಸರು
ಹರುಷದಿಂದಲಿ ಕಾಯೋ ಹನುಮಾ
ಹಾಲ ಬಾವಿಯೋಳಿರುವಂಥ ಭೀಮಾ |
ಗುರು ಮಧ್ವ ರಾಯರ ಚರಣಕೊಂದಿಪೆ ನಿತ್ಯ |
ಹರಿ ಸರ್ವೋತ್ತಮನೆಂಬ ನಿಜವಾದ ಮತಿ ಕೊಡು
||ಹನುಮಾ ಹಾಲ ಬಾವಿಯೋಳಿರುವಂಥ ಭೀಮಾ || ಪ||
ಅoಜನಾದೇವಿ ಸಂಭೂತಾ | ಧನಂಜಯನಣ್ಣ ಅತಿ ಪ್ರಖ್ಯಾತಾ |
ಕುಂಜಲೋಚನ ರಾಮ ದೂತಾ | ಕುರು ಭುಂಜಿಸಿ ಆನಂದತೀರ್ಥ |
ಅoಜಿಕಿನ್ಯಾತಕೆ ಸಂಜೀವ ರಾಯಾ |
ಸೌಗಂಧಿಕಾ ಪುಷ್ಪ ತಂದ ಸುಂದರ ತಂದೆ ಶ್ರೀ ||
ಸಾಗರ ದಾಟಿದ ಧೀರ | ಧರ್ಮರಾಜನ್ನ ನಿಜ ವ್ರಕೋದರ |
ಆ ಮಧ್ಯಗೇಹರ ಕುವರ |
ಹನುಮ ಭೀಮದೇವ ಮಧ್ವವತಾರ | ಆ ಮನೋಹರ ದಿವ್ಯ ರಾಮ ನಾಮಾಮೃತ |
ಪ್ರೇಮದಿ ಕರುಣಿಸೋ ಸ್ವಾಮಿ ದಯನಿಧೆ ||
ದೂರ ನೋಡದಿರೋ ಹನುಮಾ | ಕರ ಜೋಡಿಸಿ ಪ್ರಾರ್ಥಿಪೆ ಭೀಮಾ |
ಆನಂದ ತೀರ್ಥರ ಪ್ರೇಮದಿಂದ ವ್ಯಾಳ್ಯ ವ್ಯಾಳ್ಯಕೆ ಹರಿ ನಾಮಾ |
ಪ್ರೇರಣೆ ಮಾಡಿಸೋ ಭಾರತಿ ರಮಣನೆ |
ಸಿರಿ ದೊರೆ ನರಹರಿ ವಿಠಲನ ನಿಜದೂತ ||