ಮನೆ ದೇವರನಾಮ ಹರುಷದಿಂದಲಿ ಕಾಯೋ ಹನುಮಾ

ಹರುಷದಿಂದಲಿ ಕಾಯೋ ಹನುಮಾ

0

ರಚನೆ : ಶ್ರೀ ನರಹರಿ ವಿಠ್ಠಲ ದಾಸರು

ಹರುಷದಿಂದಲಿ ಕಾಯೋ ಹನುಮಾ

ಹಾಲ ಬಾವಿಯೋಳಿರುವಂಥ ಭೀಮಾ |

ಗುರು ಮಧ್ವ ರಾಯರ ಚರಣಕೊಂದಿಪೆ ನಿತ್ಯ |

ಹರಿ ಸರ್ವೋತ್ತಮನೆಂಬ ನಿಜವಾದ ಮತಿ ಕೊಡು

||ಹನುಮಾ ಹಾಲ ಬಾವಿಯೋಳಿರುವಂಥ ಭೀಮಾ || ಪ||

ಅoಜನಾದೇವಿ ಸಂಭೂತಾ | ಧನಂಜಯನಣ್ಣ ಅತಿ ಪ್ರಖ್ಯಾತಾ |

ಕುಂಜಲೋಚನ ರಾಮ ದೂತಾ | ಕುರು ಭುಂಜಿಸಿ ಆನಂದತೀರ್ಥ |

ಅoಜಿಕಿನ್ಯಾತಕೆ ಸಂಜೀವ ರಾಯಾ |

ಸೌಗಂಧಿಕಾ ಪುಷ್ಪ ತಂದ ಸುಂದರ ತಂದೆ ಶ್ರೀ ||

ಸಾಗರ ದಾಟಿದ ಧೀರ | ಧರ್ಮರಾಜನ್ನ ನಿಜ ವ್ರಕೋದರ |

ಆ ಮಧ್ಯಗೇಹರ ಕುವರ |

ಹನುಮ ಭೀಮದೇವ ಮಧ್ವವತಾರ | ಆ ಮನೋಹರ ದಿವ್ಯ ರಾಮ ನಾಮಾಮೃತ |

ಪ್ರೇಮದಿ ಕರುಣಿಸೋ ಸ್ವಾಮಿ ದಯನಿಧೆ ||

ದೂರ ನೋಡದಿರೋ ಹನುಮಾ | ಕರ ಜೋಡಿಸಿ ಪ್ರಾರ್ಥಿಪೆ ಭೀಮಾ |

ಆನಂದ ತೀರ್ಥರ ಪ್ರೇಮದಿಂದ ವ್ಯಾಳ್ಯ ವ್ಯಾಳ್ಯಕೆ ಹರಿ ನಾಮಾ |

ಪ್ರೇರಣೆ ಮಾಡಿಸೋ ಭಾರತಿ ರಮಣನೆ |

ಸಿರಿ ದೊರೆ ನರಹರಿ ವಿಠಲನ ನಿಜದೂತ ||

ಹಿಂದಿನ ಲೇಖನಗಲ್ಲುಶಿಕ್ಷೆಗೊಳಗಾದವರಿಂದ ವಿಳಂಬದ ಲಾಭ; ಕ್ಷಮಾದಾನ ಅರ್ಜಿಗಳ ಬೇಗ ನಿರ್ಧರಿಸಿ ಎಂದ ಸುಪ್ರೀಂ
ಮುಂದಿನ ಲೇಖನಅರ್ಧ ಮತ್ಸೇಂದ್ರಾಸನ