ಮನೆ ದೇವರ ನಾಮ ಗಜಮುಖನೆ ಗೌರಿ ಸುತನೆ

ಗಜಮುಖನೆ ಗೌರಿ ಸುತನೆ

0

ಗಜಮುಖನೆ ಗೌರಿ ಸುತನೆ |

ಷಣ್ಮುಖ ಸೋದರ ನೇ |

 ರಜತಗಿರಿ ಒಡೆಯ ಕುಮಾರನೇ ||

ವಿಜಯ ವಿನಾಯಕನೇ |    

ವಿಜಯ ವಿನಾಯಕನೇ ಗಜಮುಖನೆ ಕರುಣಸಾಗರನೇ ||

ಹರಿಹರ ಬ್ರಹ್ಮರು ಅನವರತ ಬಜಿಸುವ ||

ಮುಜಗದೊಡೆಯ ಗಣೇಶನೇ || ವಿಜಯ ||   

ನೀನೇ ಮೊದಲು ನಿನ್ನಿಂದ ತಾನೇ ಆರಂಭ ಜಗದಲೆಲ್ಲ  ಮೊದಲ ಪೂಜೆ ನಿನಗಾದ ಮೇಲೆ ಇನ್ನುಳಿದ ಪೂಜೆ ಎಲ್ಲ ||

ನೀನು ಹರಸಿದರೆ ಯಾವ ಕಾರ್ಯದಲ್ಲು ವಿಘ್ನವೆಂಬುದಿಲ್ಲ ||ವಿಜಯ||    

ಸುಲಭ ಪೂಜೆಗೆ ಕರುಣೆಯಿಂದ ನೀ ಬೇಗ ಒಲಿದು ಬರುವೆ.  ಹುಲ್ಲುಗರಿಕೆಯ ಹೂವಿನಂತೆ ಸ್ವೀಕರಿಸಿ ವರವ ಕೊಡುವೆ ||

ಪ್ರೇಮದಿ ನೆನೆದವರ ಮನದಲ್ಲಿ ಸ್ಥಿರವಾಗಿ ಎಂದು ಇರುವೆ ||ವಿಜಯ||

ಹಿಂದಿನ ಲೇಖನಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಮುಂದಿನ ಲೇಖನಮನೆ ಮದ್ದು: ಬೇವಿನ ಚೂರ್ಣ