ಮನೆ ದೇವರ ನಾಮ ರಾಘವೇಂದ್ರ ತವನಾಮವೇ ಮಧುರ

ರಾಘವೇಂದ್ರ ತವನಾಮವೇ ಮಧುರ

0

ರಾಘವೇಂದ್ರ ತವನಾಮವೇ ಮಧುರ |

ಅಲೆಯುವ ಮನಸಿಗೆ ಅದು ಅಭಾರ ||

ಕಷ್ಟವು ಬಂದಾಗ ಕರೆಯುವ ಶುಭ ನಾಮ |

ಕುಲಹೀನನಾದರೆ ಕೂಗಿ ನಿವಾರಿಸುವ ನಾಮ || ರಾಘವೇಂದ್ರ ||

ರಾ ಎನೆ ರಾಸಿ ದೋಷವು ದಹಿಸುವದು |

ಘಎನೆ ಘನಮಟಿ ಈಯುವರು |

ವೇಂ ಎನೆ ವೇಗದಿ ಬಂದು ಪೊರೆಯುವರು |

ದ್ರೆಎನೆ ದಾರಿದ್ರ್ಯವನ್ನು ನೀಗುವರು ರಾಘವೇಂದ್ರ ರಾಘವೇಂದ್ರ |

ಕೋರಸ್ :  ರಾಘವೇಂದ್ರ ರಾಘವೇಂದ್ರ |

ಧರೆಯಲಿ ನಾಮಕೆ ಮಿಗಿಲಾವುದಿಲ್ಲ.

ಅರಿಯದ ಪಾಮರ ನಾನೇನು ಬಲ್ಲೆ |

ಪರಿ ಪರಿ ಭಜಿಸಲು ಅಭೀಷ್ಟ ಕೊಡಬಲ್ಲ |

ಗುರುರಾಯರ ನಾಮ ನೆನೆದರೆ ಭಯವಿಲ್ಲ || ರಾಘವೇಂದ್ರ ||