ಎಂಥಾ ರೂಪವೋ ನಿನ್ನದು….
ಎಂಥಾ ರೂಪವೋ || ಪ
ನೀಲಾಕಾಶದ ಬಣ್ಣವೋ
ಎಂಥಾ ರೂಪವೋ || ಅ ಪ
ಹಾಲಿನ ಕೆನೆ ಬಣ್ಣದಂತೆ ಬಣ್ಣ ನಿನ್ನದು
ಹೊಸ ಬೆಣ್ಣೆಯಂತೆ ನುಣುಪು ಕೆನ್ನೆ ನಿನ್ನದು
ಜಗದ ಸಾರ ಹೀರುವ ಮೂಗು ನಿನ್ನದು
ಮೊಗದಗಲ ಕಾಂತಿಯು ಮಿಂಚುತ್ತಿರುವುದು || 1
ಬೆಟ್ಟ ಗುಡ್ಡಗಳಂತೆ ದೇಹ ನಿನ್ನದು
ಸೂರ್ಯ ಚಂದ್ರನಂತೆ ಕಣ್ಣು ನಿನ್ನದು
ಸಪ್ತಸಾಗರದ ಆಳದಂತೆ ಭಾವ ನಿನ್ನದು
ತೃಪ್ತವಾಯಿತು ನಿನ್ನ ಕಂಡ ಹೃದಯ ನನ್ನದು || 2
ಎಷ್ಟು ಜನ್ಮದ ಪುಣ್ಯದ ಫಲವೋ
ನಿನ್ನ ರೂಪ ತೋರಿದೆ ಎನೆಗೆ…
ಮೂಢಮತಿಯು ನಾನಾರಿತೆನಿಂದು ಸಿಹಿ ಮಧುರ |
ಜಾಹ್ನವಿ ವಿಠಲನ ನಿನ್ನನ್ನು ಕೊನೆಗೆ… || 3