ಅಚ್ಯುತನೊಲಿದರೆ ಚಂದವೋ…
ಅಚ್ಚುತನೆಂದರೆ ಆನಂದವೋ || ಪ
ಅಗಣಿತ ಮಹಿಮನ ನಾಮವೋ
ಅಸದಳ ಮಹಿಮೆಯ ಸಾರವೋ
ಅಖಿಲ ಕೋಟಿ ಬ್ರಹ್ಮಾಂಡದ ಉದ್ಧಾರವೋ
ನಿಖಿಲ ಭಕ್ತ ಜನರ ಭವ ಪಾರವೋ || 1
ಸೂಜಿಗವಲ್ಲ ಇದು ನಿಜ ಕಾಣೋ
ಮೋಜಿನಿಂದ ಭಜಿಸಿದರು ಬರುವನೋ
ಗೋಜು ಬೀಳದೆ ಹರಿನಾಮವ ಜಪಿಸೋ
ರಾಜೀವ ಲೋಚನನ ಕೊಂಡಾಡೋ || 2
ದಶಾವತಾರದ ದಾರ್ಷಿಕನ ನೋಡೋ
ಕಾಶಾಯ ಧರಿಸದ ಗುರುವನು ಕಾಣೋ
ಲೇಸಾಗಿ ಓಡೋಡಿ ಬರುವ ಶ್ರೀ ಶನಿವನೋ
ಬೇಷಾಗಿ ಜಹ್ನವಿ ವಿಠಲನ ಭಜಿಸೋ | 3