ಮನೆ ದೇವರ ನಾಮ ಅಚ್ಯುತನೊಲಿದರೆ ಚಂದವೋ

ಅಚ್ಯುತನೊಲಿದರೆ ಚಂದವೋ

0

ಅಚ್ಯುತನೊಲಿದರೆ ಚಂದವೋ…

ಅಚ್ಚುತನೆಂದರೆ ಆನಂದವೋ || ಪ

ಅಗಣಿತ ಮಹಿಮನ ನಾಮವೋ

ಅಸದಳ ಮಹಿಮೆಯ ಸಾರವೋ

ಅಖಿಲ ಕೋಟಿ ಬ್ರಹ್ಮಾಂಡದ ಉದ್ಧಾರವೋ

ನಿಖಿಲ ಭಕ್ತ ಜನರ ಭವ ಪಾರವೋ  || 1

ಸೂಜಿಗವಲ್ಲ ಇದು ನಿಜ ಕಾಣೋ

ಮೋಜಿನಿಂದ ಭಜಿಸಿದರು ಬರುವನೋ

ಗೋಜು ಬೀಳದೆ ಹರಿನಾಮವ ಜಪಿಸೋ

ರಾಜೀವ ಲೋಚನನ ಕೊಂಡಾಡೋ || 2

ದಶಾವತಾರದ ದಾರ್ಷಿಕನ ನೋಡೋ

ಕಾಶಾಯ ಧರಿಸದ ಗುರುವನು ಕಾಣೋ

ಲೇಸಾಗಿ ಓಡೋಡಿ ಬರುವ ಶ್ರೀ ಶನಿವನೋ

ಬೇಷಾಗಿ ಜಹ್ನವಿ ವಿಠಲನ ಭಜಿಸೋ | 3

ಹಿಂದಿನ ಲೇಖನಬೆಳಗಾವಿ ಅಧಿವೇಶನದಲ್ಲಿ ಸರಕಾರದ ಬಣ್ಣ ಬರಲು ಮಾಡುತ್ತೇವೆ : ಆರ್.ಅಶೋಕ್
ಮುಂದಿನ ಲೇಖನಹಾಸ್ಯ