ಕೊಳಲಾ…ಊದುವ ಚತುರ ಯಾರೆ ಪೇಳಮ್ಮಯ್ಯ|
ತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಕೊಳಲಾ||
ನಾದದಿ ತುಂಬಿತು ಗೋವರ್ಧನಗಿರಿ |
ಯಾದವ ಕುಲಗಣ ಪೊರೆದಿತು ಖಗಕುಲ |
ಸಾಧಿಸಿ ನೋಡಲು ಕೃಷ್ಣನು ಈಗಲು |
ಸಾಧ್ಯವೇನೆ ವ್ರಂದಾವನದೊಲು
||ಕೊಳಲಾ||
ಮೇವು ಮರೆತವು ಗೋವುಗಳೆಲ್ಲವು |
ಸಾವಧಾನದಿಂದ ಹರಿದಳು ಯಮುನೆ |
ಆವು ಕಾವುತಲಿ ಗೋವಳರೆಲ್ಲರ |
ಹಾವಭಾವದಲಿ ವ್ರಂದಾವನದೊಳು
||ಕೊಳಲಾ||
ಸುರರುಸುರಿದರಾಕಾಶದಿ ಸುಮಗಳ |
ಸವಿದುಪೋಗಿ ನೋಡೆ ವ್ರಂದಾವನದೊಳು |
ಸಾರಿಸಾರಿ ಶ್ರೀಕ್ರಷ್ಣನು ಈಗಲು |
ತುರುಗಳ ತಾ ಕಾಯ್ವ ಕದಂಬ ವನದೊಳು
||ಕೊಳಲಾ||