ಮನೆ ಮನರಂಜನೆ ಸೆಟ್ಟೇರಿದ ನಟ ಧನುಷ್ ಅಭಿನಯದ 50ನೇ ಸಿನಿಮಾ

ಸೆಟ್ಟೇರಿದ ನಟ ಧನುಷ್ ಅಭಿನಯದ 50ನೇ ಸಿನಿಮಾ

0

ಖ್ಯಾತ ನಟ ಧನುಷ್​ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಈಗ ಧನುಷ್ ಅವರ 50ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಹಾಗಾಗಿ ಸದ್ಯಕ್ಕೆ ಇದನ್ನು ‘D50’ ಎಂದು ಕರೆಯಲಾಗುತ್ತಿದೆ.

Join Our Whatsapp Group

ಕೆಲವೇ ದಿನಗಳ ಹಿಂದೆ ಧನುಷ್​ ಅವರು ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಕೆಲಸಗಳನ್ನು ಮುಗಿಸಿದರು. ‘ಕ್ಯಾಪ್ಟನ್​ ಮಿಲ್ಲರ್​’ ಬಳಿಕ ಧನುಷ್​ ನಟಿಸುತ್ತಿರುವ ಚಿತ್ರವೇ ‘D50’. ಈ ಸಿನಿಮಾದ ಶೂಟಿಂಗ್​ ಶುರುವಾಗಿದೆ ಎಂದು ತಿಳಿಸುವ ಸಲುವಾಗಿ ಮೊದಲ ಪೋಸ್ಟರ್ ಹಂಚಿಕೊಳ್ಳಲಾಗಿದೆ.

ಧನುಷ್​ ಅವರು ಕ್ಯಾಮೆರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಶರ್ಟ್​ ಲೆಸ್​ ಆಗಿ ಅವರು ಪೋಸ್​ ನೀಡಿದ್ದು, ತಲೆ ಬೋಳಿಸಿಕೊಂಡಂತಿದೆ. ಪೋಸ್ಟರ್ ​ನಲ್ಲಿ ಕೆಂಪು ಬಣ್ಣ ಹೈಲೈಟ್​ ಆಗಿದೆ. ಈ ಸಿನಿಮಾವನ್ನು ಸ್ವತಃ ಧನುಷ್​ ಅವರು ನಿರ್ದೇಶಿಸುತ್ತಿದ್ದಾರೆ. ‘ಸನ್​ ಪಿಕ್ಚರ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಹಿಂದಿನ ಲೇಖನರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಅಶ್ವತ್ಥನಾರಾಯಣ ಸಂಫೂರ್ಣ ಹಾಳು ಮಾಡಿದ್ದಾರೆ: ವೀರಪ್ಪ ಮೊಯ್ಲಿ
ಮುಂದಿನ ಲೇಖನಕೆಎಸ್ ಆರ್ ಟಿಸಿ ಬಸ್ ಚಾಲಕ ಆತ್ಮಹತ್ಯೆ ಪ್ರಕರಣ ತನಿಖೆ:  ಗೃಹ ಸಚಿವ ಡಾ.ಜಿ.ಪರಮೇಶ್ವರ್