“ಡೈಮಂಡ್ ಕ್ರಾಸ್’ ಎಂಬ ಚಿತ್ರವೊಂದು ಇಂದು ತೆರೆಕಾಣುತ್ತಿದೆ. ರಾಮ್ ದೀಪ್ ಈ ಚಿತ್ರದ ನಿರ್ದೇಶಕರು. ರಾಮಚಂದ್ರ ಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಇದೊಂದು ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಚಿತ್ರ. ಈಗಿನ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬಳಸಿ ಕೊಳ್ಳಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟ್ಟಿದ್ದೇವೆ ಎನ್ನುವುದು ತಂಡದ ಮಾತು.
ರೋಜರ್ ನಾರಾಯಣ್, ರಜತ್ ಅಣ್ಣಪ್ಪ, ಮನು ಕೆ.ಎಂ ಹಾಗೂ ರೂಪಿಕಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೇಖನ್ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತ ಅನಿಶ್ ಚೆರಿಯನ್ ನೀಡಿದ್ದಾರೆ.
ರಾಮಚಂದ್ರ ಬಾಬು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ, ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ, ಸಂಕಲನ ಚಿತ್ರಕ್ಕಿದೆ. ಮನೀಶ್ ಮೆಹ್ತಾ ಈ ಚಿತ್ರದ ನಿರ್ಮಾಪಕರು.














