ಮನೆ ಸುದ್ದಿ ಜಾಲ ಶಾಸಕರಾದ ಎಲ್ ನಾಗೇಂದ್ರರವರ ಪತ್ನಿ ಅವರಿಂದ ಮತಯಾಚನೆ

ಶಾಸಕರಾದ ಎಲ್ ನಾಗೇಂದ್ರರವರ ಪತ್ನಿ ಅವರಿಂದ ಮತಯಾಚನೆ

0

ಮೈಸೂರು: ವಿಜಯನಗರದಲ್ಲಿ ಶಾಸಕ  ಎಲ್.ನಾಗೇಂದ್ರರವರ ಧರ್ಮಪತ್ನಿ ಶೀಲಾ ನಾಗೇಂದ್ರ ಅವರು ಬಿಜೆಪಿ ಮಹಿಳಾ ಮೋರ್ಚಾ ಜೊತೆಗೂಡಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

Join Our Whatsapp Group

ನಂತರ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ವಿಚಾರ. ಅದೇ ರೀತಿಯಲ್ಲಿ ಮತದಾನದ ಪ್ರಕ್ರಿಯೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಬಂದು ಮತ ಚಲಾಯಿಸುವಲ್ಲಿ ಮುಂದಾಗ ಬೇಕೆಂದು ಮನವಿ ಮಾಡಿದರು.

ಚಾಮರಾಜ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತನ್ನು ಮನೆ ಮನೆಗೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದ್ದು, ಈ ಬಾರಿಯ ಅಭಿವೃದ್ಧಿಯ ಪ್ರಗತಿಯನ್ನು ನೋಡಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ಜನಸಾಮಾನ್ಯರು ಆಶೀರ್ವದಿಸಲಿದ್ದಾರೆ ಎಂದರು.

ಶಾಸಕರಾದ ಎಲ್. ನಾಗೇಂದ್ರ ಧರ್ಮ ಪತ್ನಿ ಶೀಲಾ ನಾಗೇಂದ್ರ, ಚೈತ್ರ ಚೌಡಪ್ಪ, ಬಿಜೆಪಿ ಮಹಿಳಾ ನಗರಾಧ್ಯಕ್ಷರಾದ ಹೇಮಾನಂದೀಶ್, ಉಪಾಧ್ಯಕ್ಷರಾದ ಸರಸ್ವತಿ ಪ್ರಸಾದ್, ಪ್ರಮೋದಿನಿ ಸುರೇಶ್, ನಾಗಮಣಿ. ಜೆ ಹರ್ಷ, ಕಾವೇರಿ, ಪುಷ್ಪ ಬಾಬು, ರೇಖಾ, ಚಂದನ, ವೇದಾವತಿ, ರಚನಾ ಇನ್ನಿತರರು ಇದ್ದರು..

ಹಿಂದಿನ ಲೇಖನಆಗಸ್ಟ್ 10ರಂದು ರಜಿನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ ‘ಜೈಲರ್’ ಬಿಡುಗಡೆ
ಮುಂದಿನ ಲೇಖನಭಾರತ-ಪಾಕ್ ನಡುವಣ ಹೈ-ವೋಲ್ಟೇಜ್ ಒಡಿಐ ವಿಶ್ವಕಪ್ ಪಂದ್ಯಕ್ಕೆ ಅಹ್ಮದಾಬಾದ್ ಆತಿಥ್ಯ!