ಮನೆ ಯೋಗಾಸನ ದಿನಾ ಈ ಯೋಗಾಸನಗಳನ್ನು ಮಾಡಿದರೆ ಮಧುಮೇಹವನ್ನು ಸೋಲಿಸಬಹುದು!

ದಿನಾ ಈ ಯೋಗಾಸನಗಳನ್ನು ಮಾಡಿದರೆ ಮಧುಮೇಹವನ್ನು ಸೋಲಿಸಬಹುದು!

0

ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಹೋಗುವುದಿಲ್ಲ. ಕ್ರಮೇಣವಾಗಿ ಅದು ಇಡೀ ದೇಹವನ್ನು ಆವರಿಸಿ ಕೊಳ್ಳುತ್ತದೆ. ಉತ್ತಮವಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅದನ್ನು ನಿಯಂತ್ರಣ ಮಾಡಿಕೊಳ್ಳಬಹುದು ಅಷ್ಟೇ!

ಹೀಗಾಗಿ ಮಧುಮೇಹವನ್ನು ಕಂಟ್ರೋಲ್ ಮಾಡಲು ವಿವಿಧ ಬಗೆಯ ವ್ಯಾಯಾಮಗಳನ್ನು ಹುಡುಕುತ್ತಿದ್ದರೆ, ನಿಮಗಾಗಿ ಮೂರು ಸುಲಭವಾದ ಯೋಗಾಭ್ಯಾಸಗಳನ್ನು ನಾವು ನಿಮ್ಮ ಮುಂದೆ ತರುತ್ತಿದ್ದೇವೆ. ಇದರಿಂದ ಕೇವಲ ನಿಮ್ಮ ಸಕ್ಕರೆ ಕಾಯಿಲೆ ಮಾತ್ರವಲ್ಲ ಬದಲಿಗೆ ನಿಮ್ಮ ದೇಹಕ್ಕೆ ಮತ್ತು ಮೆದುಳಿಗೆ ಕೂಡ ಸಾಕಷ್ಟು ಪ್ರಯೋಜನಕಾರಿ ಲಾಭಗಳಿವೆ.

ನಿಮ್ಮ ಕೀಲು ನೋವುಗಳಿಗೆ ಉತ್ತಮ ಪರಿಹಾರ ಸಿಗುವುದು ಮಾತ್ರವಲ್ಲದೆ, ರಕ್ತದ ಒತ್ತಡವನ್ನು ಸಹ ನಿಯಂತ್ರಣ ಮಾಡುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸಿ ನಿಮ್ಮ ಮಧುಮೇಹ ವನ್ನು ನಿಯಂತ್ರಣ ಮಾಡುತ್ತದೆ. ಹೀಗಾಗಿ ಒಂದು ವೇಳೆ ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ, ನಿಮಗೆ ಉಪಯುಕ್ತವಾಗುವ ಈ ಕೆಳಗಿನ ಯೋಗಾಸನಗಳನ್ನು ಟ್ರೈ ಮಾಡಿ.

ಕುಳಿತು ಮುಂದಕ್ಕೆ ಬಾಗುವ ಭಂಗಿ

ಯಾರಿಗೆ ಮಧುಮೇಹ ಸಮಸ್ಯೆ ಇರುತ್ತದೆ ಅಂತಹವರಿಗೆ ಈ ಯೋಗಾಸನ ಬಹಳ ಪ್ರಯೋಜನಕಾರಿಯೆಂದು ಹೇಳಬಹುದು. ಇದು ರಕ್ತದಲ್ಲಿನ ಒತ್ತಡವನ್ನು ಕಡಿಮೆ ಮಾಡಿ ದೇಹದ ತೂಕವನ್ನು ನಿಯಂತ್ರಣ ಮಾಡುತ್ತದೆ.

ಇದನ್ನು ಮಾಡುವುದು ಹೇಗೆ?

ನೆಲದ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ.

ನಿಮ್ಮ ಕಾಲಿನ ಬೆರಳುಗಳನ್ನು ಹಿಂದಕ್ಕೆ ತರುವ ಹಾಗೆ ಮಾಡಿ ನಿಮ್ಮ ಬೆನ್ನಿನ ಭಾಗವನ್ನು ನೇರವಾಗಿರಿಸಿ ನಿಮಗೆ ಎದೆಯ ಭಾಗವನ್ನು ಮುಂದಕ್ಕೆ ತನ್ನಿ.

ನಿಮ್ಮ ಸೊಂಟದ ಭಾಗವನ್ನು ಬಾಗಿಸಿ ಮುಂದಕ್ಕೆ ಹೋಗುವಂತೆ ಭಂಗಿ ಮಾಡಿಕೊಳ್ಳಿ.

ಇನ್ನು ಎರಡೂ ಕೈಗಳನ್ನು ಪಾದಗಳ ಕಡೆಗೆ ಸಾಧ್ಯವಾದಷ್ಟು ಚಾಚಿ.

ಗಲ್ಲ ಹಾಗೂ ಎದೆಯ ಭಾಗಕ್ಕೆ ತಾಗುವಂತೆ ಕೆಲವು ನಿಮಿಷಗಳು ಇದ್ದು, ಆರಾಮದಾಯಕ ಅನುಭವ ಪಡೆದುಕೊಳ್ಳಿ.

ಶೋಲ್ಡರ್ ಸ್ಟ್ಯಾಂಡ್

ಇದು ನಿಮ್ಮ ದೇಹವನ್ನು ಉಲ್ಟಾ ಮಾಡಿ ಯೋಗಾಸನ ಮಾಡುವ ಭಂಗಿ. ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಅಭಿವೃದ್ಧಿಪಡಿಸಿ ಥೈರಾಯಿಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ನಿಮ್ಮನ್ನು ಸಾಕಷ್ಟು ವಿಶ್ರಾಂತಿಯಾಗಿ ಇರಿಸುತ್ತದೆ.

ಇದನ್ನು ಮಾಡುವುದು ಹೇಗೆ?

ನಿಮ್ಮ ಎರಡು ಕೈಗಳನ್ನು ಅಕ್ಕಪಕ್ಕ ಇರಿಸಿ ನೆಲದ ಮೇಲೆ ಕುಳಿತುಕೊಳ್ಳಿ. ನಿಮ್ಮ ಅಂಗೈಗಳು ನೆಲದ ಕಡೆಗೆ ಮುಖ ಮಾಡಿರಬೇಕು.

ಈಗ ನಿಧಾನವಾಗಿ ನಿಮ್ಮ ಎರಡೂ ಕಾಲುಗಳನ್ನು ಗಾಳಿಯಲ್ಲಿ ಮೇಲೆತ್ತಿ ನಿಮ್ಮ ತಲೆಯ ಕಡೆಗೆ ತಂದುಕೊಳ್ಳಿ.

ಈಗ ನಿಮ್ಮ ಎರಡು ಕೈಗಳನ್ನು ನಿಮ್ಮ ಸೊಂಟದ ಕಡೆಗೆ ಬೆಂಬಲಕ್ಕಾಗಿ ತೆಗೆದುಕೊಂಡು ಹೋಗಿ.

ನಿಮ್ಮ ಎರಡು ಭುಜಗಳು, ಬೆನ್ನು ಒಂದೇ ಲೈನ್ ನಲ್ಲಿರಬೇಕು.

ಈ ಭಂಗಿಯಲ್ಲಿ 30 ಸೆಕೆಂಡುಗಳು ಅಥವಾ ನಿಮಗೆ ಆರಾಮದಾಯಕ ಎನಿಸುವಷ್ಟು ಸಮಯ ಇದ್ದು, ನಂತರ ಸಾಧಾರಣ ಸ್ಥಿತಿಗೆ ಬನ್ನಿ.

ಮತ್ತೆ ವಾಪಸ್ ನಿಮ್ಮ ಭಂಗಿಗೆ ತೆರಳಲು ನಿಮ್ಮ ಕಾಲುಗಳನ್ನು ನೆಲದ ಮೇಲೆ ತಂದು ಬೆನ್ನಿನ ಭಾಗವನ್ನು ವಿಶ್ರಾಂತಿಪಡಿಸಿ.

ಇದು ಸಹ ದೇಹವನ್ನು ಉಲ್ಟಾ ಮಾಡಿ ವಿಶ್ರಾಂತಿ ಪಡೆದುಕೊಳ್ಳುವ ಯೋಗದ ಭಂಗಿ. ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ನಿಮ್ಮ ರಕ್ತದ ಒತ್ತಡವನ್ನು ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಿ ನಿಮ್ಮ ದೇಹದಲ್ಲಿ ರಕ್ತಸಂಚಾರವನ್ನು ಅಧಿಕಗೊಳಿಸುತ್ತದೆ ಜೊತೆಗೆ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಈ ಯೋಗಾಭ್ಯಾಸವನ್ನು ಟ್ರೈ ಮಾಡುವುದು ಹೇಗೆ?

ಮೊದಲಿಗೆ ನೆಲದ ಮೇಲೆ ಕುಳಿತುಕೊಳ್ಳಿ

ಈಗ ನಿಮ್ಮ ಕಾಲುಗಳನ್ನು ಗೋಡೆಯ ಕಡೆಗೆ ಮೇಲೆತ್ತಿ ಬೆನ್ನು ನೆಲದ ಮೇಲೆ ಬರುವಂತೆ ಮಲಗಿಕೊಳ್ಳಿ.

ನಿಮ್ಮ ದೇಹ 90-degree ಆಕಾರದಲ್ಲಿ ಗೋಡೆಗೆ ವಿರುದ್ಧವಾಗಿ ಇರಬೇಕು. ನಿಮ್ಮ ಸೊಂಟದ ಭಾಗ ಗೋಡೆಗೆ ತಾಗಿರಬೇಕು.

ಈಗ ನಿಮ್ಮ ಕುತ್ತಿಗೆ ಮತ್ತು ಗಲ್ಲವನ್ನು ವಿಶ್ರಾಂತಿಗೊಳಿಸಿ ನಿಮ್ಮ ಎರಡು ಕೈಗಳನ್ನು ಅಕ್ಕಪಕ್ಕ ಚಾಚಿ ನಿಮ್ಮ ಅಂಗೈಗಳು ಮೇಲ್ಭಾಗ ನೋಡುವಂತೆ ಇಟ್ಟುಕೊಳ್ಳಿ.

ಇದೇ ಭಂಗಿಯಲ್ಲಿ ನೀವು ಕೆಲ ಹೊತ್ತು ಇದ್ದು, ಆನಂತರ ಮತ್ತೆ ನಿಮ್ಮ ಕಾಲುಗಳನ್ನು ಕೆಳಗಿರಿಸಿ ಸಹಜ ಸ್ಥಿತಿಗೆ ಬರಬಹುದು.