ಮನೆ ದೇವರನಾಮ ಪಂಢರಪುರವಾಸ ಪಾಲಿಸೊ ಶ್ರೀಶ

ಪಂಢರಪುರವಾಸ ಪಾಲಿಸೊ ಶ್ರೀಶ

0

ಪಂಢರಪುರವಾಸ ಪಾಲಿಸೊ ಶ್ರೀಶ ||ಪ ||

ಶ್ರೇಷ್ಠಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ

ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ || 1 ||

ಪಾಂಡುರಾಯನ ಸುತ ಗಾಂಡೀವರ್ಜುನ ದೂತ

ಬಂಡಿ ನಡೆಸಿದಾತ ಪುಂಡರೀಕವರದನೀತ || 2 ||

ಮುಕುತಿದಾಯಕ ಮುದ್ದು ರುಕುಮಿಯ ರಮಣನೆ

ಭಕುತವತ್ಸಲಯೆನಗೆ ಸಕಲಾಭೀಷ್ಟವ ನೀಡೊ || 3 ||

ಬುಕ್ಕ್ಹಿಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ

ಅಪ್ಪಿಕೊಂಡರೆ ಸಾರೂಪ್ಯ ಕೊಡುವ ದಾತ || 4 ||

ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ

ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲಿಟ್ಟಿ || 5 ||

ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ

ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ || 6 ||

ಕಂಬದೊಳಗೆ ನಿಂತ ಪುರಂದರ ದಾಸರು

ವಂದನೆ ಮಾಡೆ ಇವರೆ ನಾರದರೆಂದು ನಾ ತಿಳಿದೆ || 7 ||

ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ

ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ || 8 ||

ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ

ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠ ಸ್ಥಾನ || 9 ||

ಹಿಂದಿನ ಲೇಖನಶಾಶ್ವತವಾದ ನಾಯಕರಾಗಿ ಜನರ ಎದೆಯಲ್ಲಿ ಅಪ್ಪು ಉಳಿದಿದ್ದಾರೆ: ಪ್ರೊ.ಮುಜಾಫರ್‌ ಅಸ್ಸಾದಿ
ಮುಂದಿನ ಲೇಖನದಿನಾ ಈ ಯೋಗಾಸನಗಳನ್ನು ಮಾಡಿದರೆ ಮಧುಮೇಹವನ್ನು ಸೋಲಿಸಬಹುದು!