ಬೆಂಗಳೂರು: ಬಾಕಿ ಉಳಿದಿದ್ದ ಪಡಿತರ ಕಾರ್ಡ್ ಗಳನ್ನು ಇಂದಿನಿಂದ ನವೆಂಬರ್ 20ನೇ ತಾರೀಖಿನವರೆಗೂ ವಿತರಿಸಲಾಗುತ್ತದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2.96 ಲಕ್ಷ ಪಡಿತರ ಕಾರ್ಡ್ಗಳು ವಿತರಣೆಗೆ ಬಾಕಿ ಉಳಿದಿದ್ದವು. ಈ ಕಾರ್ಡ್ ಗಳನ್ನು ಸದ್ಯ ಪರಿಶೀಲಿಸಲಾಗಿದ್ದು 2.96 ಲಕ್ಷ ಕಾರ್ಡ್ ಗಳ ಪೈಕಿ 2.78 ಕಾರ್ಡ್ ಗಳ ಪರಿಶೀಲನೆ ನಡೆದಿದೆ. ದಾಖಾಲೆಗಳು ಸರಿ ಇಲ್ಲದ ಕಾರಣ 50 ಸಾವಿರ ಕಾರ್ಡ್ ಗಳನ್ನ ರದ್ದುಪಡಿಸಲಾಗಿದೆ. ಸದ್ಯ 2 ಲಕ್ಷದ 28 ಸಾವಿರ ಕಾರ್ಡ್ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಪಡಿತರ ಕಾರ್ಡ್ ದಾರರಿಗೆ ಆಹಾರ ಇಲಾಖೆಯಿಂದ ಸಂದೇಶ ರಾವಾನಿಸಲಾಗಿದ್ದು, ಒಟಿಪಿ ನಂಬರ್ ಪಡೆದು ತಾವೇ ಗೂಗಲ್ ನಲ್ಲಿ ಕಾರ್ಡ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಪ್ರುವಲ್ ಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.