ಮನೆ ಸುದ್ದಿ ಜಾಲ ಉಕ್ರೇನ್ ನಲ್ಲಿ ಜಿಲ್ಲೆಯ 10 ಮಂದಿ: ಮಾಹಿತಿ ಸಂಗ್ರಹಕ್ಕೆ ಮುಂದಾಗ ಜಿಲ್ಲಾಡಳಿತ

ಉಕ್ರೇನ್ ನಲ್ಲಿ ಜಿಲ್ಲೆಯ 10 ಮಂದಿ: ಮಾಹಿತಿ ಸಂಗ್ರಹಕ್ಕೆ ಮುಂದಾಗ ಜಿಲ್ಲಾಡಳಿತ

0

ಮೈಸೂರು: ಉಕ್ರೇನ್‌ನಲ್ಲಿ ಜಿಲ್ಲೆಯ 10 ಮಂದಿ ಸಿಲುಕಿದ್ದು ಅವರ ಕುಟುಂಬದವರಿಗಾಗಿ ಮಾಹಿತಿ ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ.

ದೂ; 08212423800, 1177, ಮೊ: 9845852481 ಸಂಪರ್ಕಿಸಲು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮನವಿ ಮಾಡಿದ್ದಾರೆ.

ಇಲ್ಲಿನ ಕುವೆಂಪುನಗರದ ನಿವಾಸಿ ಶಿವಕುಮಾರ್ ಅವರ ಪುತ್ರಿ ಐಸಿರಿ ಅವರನ್ನು ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತವಾಗಿ ಇರಿಸಿದೆ.

ಕೀವ್ ನಗರದಲ್ಲಿ ಇದ್ದ ಅವರು ಗುರುವಾರ ಭಾರತಕ್ಕೆ ಬರಲು ವಿಮಾನದ ಟಿಕೆಟ್‌ ಕಾಯ್ದಿರಿಸಿದ್ದರು. ಆದರೆ, ಯುದ್ದ ಶುರುವಾಗುತ್ತಿದ್ದಂತೆ ವಿಮಾನ ರದ್ದಾಯಿತು. ಸದ್ಯ ಅವರನ್ನು ಭಾರತೀಯ ರಾಯಭಾರ‌ ಕಚೇರಿ ಸುರಕ್ಷಿತ ಸ್ಥಳದಲ್ಲಿರಿಸಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ..

ಹಿಂದಿನ ಲೇಖನಮೇಕೆದಾಟು ಪಾದಯಾತ್ರೆ: ಚಲನಚಿತ್ರ ಕಲಾವಿದರ ಬೆಂಬಲಕ್ಕೆ ಕಾಂಗ್ರೆಸ್ ಮನವಿ
ಮುಂದಿನ ಲೇಖನಬಿಬಿಎಂಪಿ ಮೇಲೆ ಎಸಿಬಿ ದಾಳಿ: ಕಡತಗಳ ಪರಿಶೀಲನೆ