ಮನೆ ರಾಜಕೀಯ ಹೆಚ್.ವಿಶ್ವನಾಥ್ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಭೇಟಿ

ಹೆಚ್.ವಿಶ್ವನಾಥ್ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಭೇಟಿ

0

ಮೈಸೂರು: ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಭೇಟಿಯಾಗಿದ್ದಾರೆ.

ಕೆ.ಆರ್ ನಗರದಲ್ಲಿನ ಹೆಚ್.ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್ ಅವರು ಹೆಚ್.ವಿಶ್ವನಾಥ್ ಜೊತೆ ಚಹ ಸೇವಿಸಿ ಮಾತುಕತೆ ನಡೆಸಿದರು.

ಈಗಾಗಲೇ ಹೆಚ್.ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ  ಸುಳಿವು ನೀಡಿದ್ದು, ಇತ್ತೀಚೆಗಷ್ಟೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು.

ಅಲ್ಲದೆ ಕಾಂಗ್ರೆಸ್ ನನ್ನ ರಕ್ತದಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗುವ ಸೂಚನೆಯನ್ನೂ ನೀಡಿದ್ದರು.

ಹಿಂದಿನ ಲೇಖನಬ್ರಿಡ್ಜ್’ಗೆ ಕಾರು ಡಿಕ್ಕಿ” ನಾಲ್ವರ ದುರ್ಮರಣ
ಮುಂದಿನ ಲೇಖನಬಿಸಿ ಬಿಸಿ ಚಿಕನ್ ಸೂಪ್ ಸೇವಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ!