ಮನೆ ಯೋಗಾಸನ ವಿನ್ಯಾಸ ಯೋಗದಿಂದಾಗುವ ಪ್ರಯೋಜನಗಳೇನು ಗೊತ್ತಾ?

ವಿನ್ಯಾಸ ಯೋಗದಿಂದಾಗುವ ಪ್ರಯೋಜನಗಳೇನು ಗೊತ್ತಾ?

0

ಅನಾದಿ ಕಾಲದ ಯೋಗಾಸನಗಳಿಗೂ ಇಂದಿನ ಕಾಲದ ಯೋಗಾಸನಗಳಿಗೂ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಕಾಲಕ್ಕೆ ತಕ್ಕಂತೆ ಯೋಗ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತಲೇ ಬಂದಿವೆ.

ಅಷ್ಟಾಂಗ ಯೋಗದ ಬಳಿಕ ಹಠ ಯೋಗ ಹಾಗೂ ವಿನ್ಯಾಸ ಯೋಗಗಳು ಹುಟ್ಟಿಕೊಂಡವು. ಸ್ವ ಅವಲೋಕನಕ್ಕೆ ಸೀಮಿತವಾಗಿದ್ದ ಯೋಗಾಸನಗಳು ಆಧುನಿಕ ಜೀವನದಲ್ಲಿ ಆರೋಗ್ಯವನ್ನು ಉತ್ತಮಗೊಳಿಸುವ ಮಾರ್ಗವಾಯಿತು.

ಯೋಗಾಸನದ ಆಧುನಿಕ ಪ್ರಕಾರಗಳಲ್ಲಿ ವಿನ್ಯಾಸ ಯೋಗ ಕೂಡ ಒಂದು. ಹಾಗಾದರೆ ವಿನ್ಯಾಸ ಯೋಗ ಎಂದರೇನು, ವಿನ್ಯಾಸ ಯೋಗ ಹುಟ್ಟಿಕೊಂಡಿದ್ದು ಎಲ್ಲಿ ಎನ್ನುವ ಬಗ್ಗೆ ಯೋಗ ಶಿಕ್ಷಕಿ ಅಹಲ್ಯಾ ಒಂದಷ್ಟು ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ

ವಿನ್ಯಾಸ ಯೋಗ ಹುಟ್ಟಿಕೊಂಡಿದ್ದು ಮೈಸೂರಿನ ಆಸ್ಥಾನದಲ್ಲಿ…

ಮೈಸೂರಿನ ಆಸ್ಥಾನದಲ್ಲಿದ್ದ ಟಿ ಕೃಷ್ಣಣಂ ಆಚಾರ್ಯ ಎನ್ನುವ ಆಸ್ಥಾನ ಯೋಗ ಗುರುಗಳು ಈ ವಿನ್ಯಾಸ ಯೋಗವನ್ನು ಆರಂಭಿಸಿದರು. ಆ ವೇಳೆ ಆಸ್ಥಾನದಲ್ಲಿದ್ದ ಸೈನಿಕರ ದೇಹವನ್ನು ಬಲಗೊಳಿಸಲು ಕೃಷ್ಣಣಂ ಆಚಾರ್ಯ ಅವರು ವಿನ್ಯಾಸ ಯೋಗ ಎನ್ನುವ ಹೊಸ ಪದ್ಧತಿಯನ್ನು ಜಾರಿಗೆ ತಂದರು. ಈ ಮೂಲಕ ಯೋಗ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಯಾಯಿತು.

ವಿನ್ಯಾಸ ಯೋಗ

ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯೋಗದಲ್ಲಿ ಅನೇಕ ಸಂಪ್ರದಾಯಗಳು ಹುಟ್ಟಿಕೊಂಡವು. ಅವುಗಳಲ್ಲಿ ವಿನ್ಯಾಸ ಯೋಗ ಕೂಡ ಒಂದು. ವಿನ್ಯಾಸ ಯೋಗ ಎಂದರೆ ಒಂದು ರೀತಿಯ ಕೊರಿಯೋಗ್ರಫಿ. ಒಂದು ಆಸನದಿಂದ ಇನ್ನೊಂದು ಆಸನಕ್ಕೆ ತೆರಳುವ ವಿಧಾನ. ಇತ್ತೀಚಿನ ದಿನಗಳಲ್ಲಿ ವಿನ್ಯಾಸ ಯೋಗ ಹೆಚ್ಚು ಪ್ರಾಶಸ್ತ್ಯ ಪಡೆದುಕೊಳ್ಳುತ್ತಿದೆ. ಸ್ಪರ್ಧೆ, ಪ್ರದರ್ಶನಗಳು ಹೆಚ್ಚು ನಡೆಯುವ ಕಾರಣ ಆರೋಗ್ಯದೊಂದಿಗೆ ಜನರನ್ನು ಸೆಳೆಯುವಲ್ಲಿಯೂ ವಿನ್ಯಾಸ ಯೋಗ ಮುಂಚೂಣಿಯಲ್ಲಿದೆ.

ವಿನ್ಯಾಸ ಯೋಗ ಮಾಡುವ ಬಗೆ…

ವಿನ್ಯಾಸ ಯೋಗ ಎಂದರೆ ಒಂದು ಆಸನದಿಂದ ಇನ್ನೊಂದು ಆಸನಕ್ಕೆ ಕನೆಟ್ಕ್ ಮಾಡುವುದು. ಅಂದರೆ ವಿನ್ಯಾಸ ಯೋಗ ಆರಂಭವಾಗುವುದು ಸೂರ್ಯ ನಮಸ್ಕಾರದಿಂದ.

ಪ್ರತಿ ಆಸನವನ್ನು ಮಾಡುವಾಗಲೂ ಕೂಡ ಸೂರ್ಯ ನಮಸ್ಕಾರದಿಂದಲೇ ಆರಂಭಿಸಿ ಮುಂದಿನ ಆಸನಗಳನ್ನು ಅಭ್ಯಾಸ ಮಾಡುವುದಾಗಿದೆ.

ಹೀಗಾಗಿ ವಿನ್ಯಾಸ ಯೋಗದಲ್ಲಿ ಪ್ರತೀ ಆಸನ ಕೂಡ ಸೂರ್ಯನಮಸ್ಕಾರದ ಭಂಗಿಯಿಂದಲೇ ಆರಂಭವಾಗಿ ಮತ್ತೊಂದು ಆಸನಕ್ಕೆ ಹೋಗಬೇಕಾಗುತ್ತದೆ.

ವಿನ್ಯಾಸಯೋಗದಲ್ಲಿ ಈ ಆಸನಗಳನ್ನು ಮಾಡಬಹುದು

• ಭುಜಂಗಾಸನ

• ಅಧೋಮುಖ ಶ್ವಾನಾಸನ

• ದಂಡಾಸನ

• ಆಂಜನೇಯಾಸನ

• ಬಾಲಾಸನ

ವಿನ್ಯಾಸಯೋಗದ ಉಪಯೋಗಗಳು

• ವಿನ್ಯಾಸ ಯೋಗದಿಂದ ವಿವಿಧ ರೀತಿಯ ಆಸನಗಳನ್ನು ಮಾಡಬಹುದಾಗಿದೆ. ಹೀಗಾಗಿ ಪ್ರತೀ ಆಸನದಿಂದ ಸಿಗುವ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

• ವಿನ್ಯಾಸ ಯೋಗವು ಸಾಮಾನ್ಯವಾಗಿ ಶಕ್ತಿ ಮತ್ತು ನಮ್ಯತೆಯನ್ನು ಬೆಳೆಸಿಕೊಳ್ಳಲು ಒಳ್ಳೆಯದು. ದೇಹದ ಸ್ನಾಯಗಳನ್ನು ಸಡಿಲಗೊಳಿಸಿ ಆರಾಮದಾಯಕ ಅನುಭೂತಿ ನೀಡುತ್ತದೆ.

• ವಿನ್ಯಾಸ ಯೋಗ ಮಾಡುವಾಗ ಹೆಚ್ಚು ದಣಿವು ಕಾಡುವುದಿಲ್ಲ. ಹೀಗಾಗಿ ದೇಹಕ್ಕೆ ಲಘು ವ್ಯಾಯಾ ದೊರಕಿ ರಕ್ತ ಸಂಚಾರ ಸುಗಮವಾಗುತ್ತದೆ. ಅಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿನ್ಯಾಸ ಯೋಗ ಸಹಕಾರಿಯಾಗಿದೆ.

ಹಿಂದಿನ ಲೇಖನಶಿವ ಅಷ್ಟಕಮ್
ಮುಂದಿನ ಲೇಖನನವರಾತ್ರಿಯಲ್ಲಿ ಈ 5 ರಾಶಿಗಳ ಮೇಲೆ ಇರುತ್ತೆ ದುರ್ಗೆಯ ವಿಶೇಷ ಕೃಪೆ..!