ಮನೆ ರಾಜ್ಯ ಅದ್ಧೂರಿಯಾಗಿ ಜರುಗಿದ ಹಾಸನದ ಶೆಟ್ಟಾಳಮ್ಮ-ಸಂತ್ಯಮ್ಮ ಜಾತ್ರಾ ಮಹೋತ್ಸವ

ಅದ್ಧೂರಿಯಾಗಿ ಜರುಗಿದ ಹಾಸನದ ಶೆಟ್ಟಾಳಮ್ಮ-ಸಂತ್ಯಮ್ಮ ಜಾತ್ರಾ ಮಹೋತ್ಸವ

0

ಹಾಸನ (Hassan)-ಹಾಸನದ ಶೆಟ್ಟಾಳಮ್ಮ-ಸಂತ್ಯಮ್ಮ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಹರಕೆಯನ್ನು ತೀರಿಸಿದರು.

ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಶೆಟ್ಟಾಳಮ್ಮ ಮತ್ತು ಸಂತ್ಯಮ್ಮ ಜಾತ್ರಾ ಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ 5-6 ಗ್ರಾಮದ ಗ್ರಾಮಸ್ಥರುಗಳು ಸೇರಿ 3 ದಿನಗಳಿಂದ ಅದ್ದೂರಿ ಜಾತ್ರಾ ಮಹೋತ್ಸವ ಆಚರಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಜರುಗಿದೆ. ಇಂದು ಸುತ್ತ ಮುತ್ತಲ ಹಳ್ಳಿಗಳಾದ ನಂದಿಪುರ, ಜೋಗಿಪುರ, ಅರಳಾಪುರ, ದಿಂಡಗೂರು, ಬಂಡಿಹಳ್ಳಿ, ಗುಂಡಶೆಟ್ಟಿಹಳ್ಳಿ, ಕುರುಬರ ಕಾಳೇನಹಳ್ಳಿಯ ಗ್ರಾಮದ ಭಕ್ತರು ಸೇರಿದಂತೆ ಹಲವು ಗ್ರಾಮಗಳಿಂದ ಭಕ್ತರು ತಮ್ಮ ತಮ್ಮ ಊರಿನಿಂದ ಎತ್ತಿನ ಬಂಡಿಕಟ್ಟಿಕೊಂಡು ಶೆಟ್ಟಿಹಳ್ಳಿಗೆ ಆಗಮಿಸಿದರು. ಇವರನ್ನು ಶೆಟ್ಟಿಹಳ್ಳಿ ಗ್ರಾಮದ 300ಕ್ಕೂ ಹೆಚ್ಚು ಮುತ್ತೈದೆಯರು ಪೂರ್ಣಕುಂಭ ಕಳಸಗಳಿಂದ ಬರಮಾಡಿಕೊಂಡರು.

ಸಾಹಸ್ರಾರು ಭಕ್ತರುಗಳನ ಸಮ್ಮುಖದಲ್ಲಿ ದೇವಿಯ ರಥೋತ್ಸವ ಜರುಗಿದ್ದು, ರಥ ಎಳೆಯುವ ವೇಳೆ, ರಥಕ್ಕೆ ಬಾಳೆಹಣ್ಣು, ಜವನ, ದುಡ್ಡನ್ನು ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಇದಾದ ಬಳಿಕ ರಾತ್ರಿ ಉತ್ಸವ ಮೂರ್ತಿಯನ್ನು ಶೆಟ್ಟಿಹಳ್ಳಿಯಲ್ಲಿ ಮೆರವಣಿಗೆ ಮಾಡಿ ಪ್ರತಿಮನೆಯಿಂದ ಮಡಲಕ್ಕಿ ಸಲ್ಲಿಸಲಾಗುತ್ತದೆ.

ನಾಲ್ಕು ದಿನಗಳ ಕಾಲ ನಡೆಯುವ ಶೆಟ್ಟಾಳಮ್ಮ ಮತ್ತು ಸಂತ್ಯಮ್ಮ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆಕಿತ್ತು. ಶೆಟ್ಟಿಳಮ್ಮ ಹಾಗೂ ಸಂತ್ಯಮ್ಮ ಉತ್ಸವ ಮೂರ್ತಿಗಳನ್ನು ದಿಂಡಗೂರಿನಿಂದ ಶೆಟ್ಟಿಹಳ್ಳಿ ಗ್ರಾಮಕ್ಕೆ ಕರೆತರಲಾಗಿತ್ತು.

ಹಿಂದಿನ ಲೇಖನಪಿಎಸ್ಐ ನೇಮಕಾತಿ ಅಕ್ರಮ: ಪ್ರಭಾವಿಯಾಗಿದ್ದರು ಬಂಧಿಸಲಾಗುವುದು; ಸಿಎಂ ಬೊಮ್ಮಾಯಿ
ಮುಂದಿನ ಲೇಖನವರನಟ ಡಾ.ರಾಜ್‌ ಕುಮಾರ್‌ ಜನ್ಮದಿನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಗೌರವ ನಮನ