ಮನೆ ಆರೋಗ್ಯ ತೂಕ ಇಳಿಸಲು ದಿನನಿತ್ಯದ ಯಾವ ಆಹಾರ ಸಹಕಾರಿ ಗೊತ್ತಾ ?

ತೂಕ ಇಳಿಸಲು ದಿನನಿತ್ಯದ ಯಾವ ಆಹಾರ ಸಹಕಾರಿ ಗೊತ್ತಾ ?

0

ತೂಕ ಇಳಿಸ್ಬೇಕು ಅನ್ನೋ ಕಾರಣಕ್ಕೆ ಸಿಕ್ಕಾಪಟ್ಟೆ ವ್ಯಾಯಾಮ ಮಾಡೋದು. ಇದ್ರ ಜೊತೆಗೆ ಕೆಲವೊಂದು ಡಯೇಟ್ ಆಹಾರಗಳನ್ನು ಕೂಡ ಸೇವಿಸ್ತಾರೆ. ಇನ್ನೂ ಅನೇಕರು ಕಡಿಮೆ ತಿನ್ನೋದ್ರಿಂದ ತೂಕ ಇಳಿಸ್ಬಹುದು ಅಂತಾನೂ ಅಂದುಕೊಂಡಿದ್ದಾರೆ. ಆದರೆ ಈ ಕಲ್ಪನೆ ತಪ್ಪು. ಕಡಿಮೆ ತಿಂದ್ರೆ ತೂಕ ಕಡಿಮೆ ಆಗೋದಿಲ್ಲ.

Join Our Whatsapp Group

ಬದಲಾಗಿ ನೀವು ದಿನ ನಿತ್ಯ ತಿನ್ನುವ ಆಹಾರದಿಂದ ತೂಕ ಇಳಿಸ್ಬಹುದು ಅಂತ ಅಧ್ಯಯನಗಳು ಸಾಬೀತು ಪಡಿಸಿದೆ. ಅಷ್ಟಕ್ಕು ನಮ್ಮ ದಿನ ನಿತ್ಯದ ಯಾವೆಲ್ಲಾ ಆಹಾರಗಳು ತೂಕ ಇಳಿಸಲು ನೆರವಾಗುತ್ತೆ ಅನ್ನೋದನ್ನು ತಿಳಿಯೋಣ.

ಅನ್ನ ಮತ್ತು ಬೇಳೆ ಸಾರು

ಮೊಸರು, ಅನ್ನ, ಸಾರು ಸಾಮಾನ್ಯವಾಗಿ ಭಾರತೀಯರು ದಿನನಿತ್ಯ ಸೇವಿಸುವ ಆಹಾರಗಳಲ್ಲಿ ಒಂದು. ಅದ್ರಲ್ಲಿ ಮುಖ್ಯವಾಗಿ ನಾವು ಅನ್ನ ಹಾಗೂ ಬೇಳೆ ಸಾರು ಜೊತೆಗೆ ಮೊಸರು ಸೇವಿಸುವುದರಿಂದ ಸುಲಭವಾಗಿ ತೂಕ ಇಳಿಸಬಹುದಂತೆ. ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಫೈಬರ್‌ ಅಂಶ ಇರೋದ್ರಿಂದ ಇದು ನಮ್ಮ ದೇಹಕ್ಕೆ ಸಮತೋಲನವನ್ನು ಒದಗಿಸುತ್ತದೆ.

ಇನ್ನೂ ಬೇಳೆಯಲ್ಲಿ ಪ್ರೋಟೀನ್, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಮತ್ತು ನಾರಿನಂಶ ಹೆಚ್ಚಿದ್ದು, ಇವೆಲ್ಲವೂ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಅನ್ನ ಮತ್ತು ಬೇಳೆ ಸಾರು ದೇಹಕ್ಕೆ ಅಗತ್ಯ ಪೌಷ್ಠಿಕಾಂಶಗಳನ್ನು ಒದಗಿಸಲು ನೆರವಾಗುತ್ತದೆ.

ಇಡ್ಲಿ- ಸಾಂಬಾರ್

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಇಡ್ಲಿ- ಸಾಂಬಾರ್ ಕೂಡ ಒಂದು ಪ್ರಮುಖ ಆಹಾರವಾಗಿದೆ. ಇದು ತೂಕ ಇಳಿಸ್ಬೇಕು ಅಂದುಕೊಳ್ತಿರೋರಿಗೆ ತುಂಬಾನೇ ಆರೋಗ್ಯಕರ ಆಹಾರ. ಇಡ್ಲಿ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಒಂದು ಇಡ್ಲಿಯಲ್ಲಿ 40-60 ಕ್ಯಾಲೋರಿಗಳು ಅಷ್ಟೇ ಇರುತ್ತದೆ. ತರಕಾರಿ ಸಾಂಬಾರ್ ಜೊತೆಗೆ ಇಡ್ಲಿಯನ್ನು ಸವಿಯಬಹುದು.

ಚಪಾತಿ ಮತ್ತು ಪಲ್ಯ

ಚಪಾತಿಯು ತೂಕ ಇಳಿಸಿಕೊಳ್ಳೋದಕ್ಕೆ ಅತ್ಯತ್ತಮ ಆಹಾರ ಅಂದ್ರೆ ತಪ್ಪಾಗೋದಿಲ್ಲ. ತೂಕ ಇಳಿಸಿಕೊಳ್ಳಬೇಕು ಎನ್ನುವವರು ಚಪಾತಿಯ ಜೊತೆಗೆ ತರಕಾರಿ ಪಲ್ಯವನ್ನು ಸೇವನೆ ಮಾಡಬಹುದು. ಚಪಾತಿಯಲ್ಲಿ ಉತ್ತಮ ಪೋಷಕಾಂಶಗಳಿದ್ದು, ಇದ್ರ ಜೊತೆಗೆ ತರಕಾರಿ ಸೇವನೆ ಮಾಡೋದ್ರಿಂದ ಇದು ನಿಮಗೆ ವಿಟಮಿನ್‌, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಖನಿಜ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.

ಅವಲಕ್ಕಿ ಜೊತೆಗೆ ಮೊಸರು

ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬೇಕು ಎನ್ನುವವರು ಅವಲಕ್ಕಿಯ ಜೊತೆಗೆ ಮೊಸರನ್ನು ಸೇವಿಸಿದರೆ ಉತ್ತಮ. ಮೊಸರಿನ ಜೊತೆಗೆ ಅವಲಕ್ಕಿ ಸೇವಿಸಿದರೆ ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅವಲಕ್ಕಿಯಲ್ಲಿ ಅಗತ್ಯವಾದ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಕಬ್ಬಿಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವಲಕ್ಕಿಯನ್ನು ಮೊಸರಿನೊಂದಿಗೆ ಸೇವಿಸಿದಾಗ ಇವು ಎರಡರಿಂದ ನೀವು ಉತ್ತಮವಾದ ಕಾರ್ಬೋಹೈಡ್ರೇಟ್ ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ ಗಳನ್ನು ಪಡೆದುಕೊಳ್ಳಬಹುದು.

ಅನ್ನ ಮತ್ತ ಮೀನು

ಊಟದ ಜೊತೆಗೆ ಮೀನು ಸೇವಿಸಿದರೆ ಇದು ತೂಕ ನಷ್ಟಕ್ಕೆ ತುಂಬಾನೇ ಒಳ್ಳೆಯದು. ಮೀನಿನಲ್ಲಿ ಸಾಕಷ್ಟು ಪೋಷಕಾಂಶಗಳಿದೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಅತ್ಯುತ್ತಮವಾಗಿದೆ. ಇದನ್ನು ಸೇವಿಸಿದರೆ ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ. ಉತ್ತಮ ಕ್ಯಾಲೋರಿಗಳು ದೇಹಕ್ಕೆ ಲಭ್ಯವಾಗುತ್ತದೆ.

ಈ ಭಾರತೀಯ ಆಹಾರಗಳು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಹಾಗೂ ತೂಕ ಕಳೆದುಕೊಳ್ಳೋದಕ್ಕೆ ಸಹಾಯಕಾರಿಯಾಗಿದೆ.