ಮನೆ ಸುದ್ದಿ ಜಾಲ ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ, ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ: ಆರ್​ಬಿಐ ಸೂಚನೆ

ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ, ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ: ಆರ್​ಬಿಐ ಸೂಚನೆ

0

ನವದೆಹಲಿ: ಎರಡಕ್ಕೂ ಹೆಚ್ಚು ವರ್ಷದಿಂದ ಖಾತೆಯನ್ನು ನಿರ್ವಹಿಸದ ಮತ್ತು ಮಿನಿಮಮ್ ಬ್ಯಾಲನ್ಸ್ ಉಳಿಸದ ಖಾತೆದಾರರಿಗೆ ದಂಡ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸಿದೆ. ಕ್ಲೈಮ್ ಆಗದ ಬ್ಯಾಂಕ್ ಹಣದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್​ಬಿಐ ಕೈಗೊಂಡಿರುವ ಹಲವು ಕ್ರಮಗಳಲ್ಲಿ ಮೇಲಿನ ಮಿನಿಮಮ್ ಬ್ಯಾಲನ್ಸ್ ಶುಲ್ಕದ ನಿರ್ಧಾರವೂ ಒಂದಾಗಿದೆ.

ಹಾಗೆಯೇ, ಸ್ಕಾಲರ್​ಶಿಪ್ ಹಣ ಪಡೆಯಲು ಅಥವಾ ಡಿಬಿಟಿ ಹಣಕ್ಕೆಂದು ರಚನೆಯಾಗಿರುವ ಬ್ಯಾಂಕ್ ಖಾತೆಗಳನ್ನು ಇನಾಪರೇಟಿವ್ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದು ವರ್ಗಾಯಿಸಬಾರದು ಎಂದೂ ಇನ್ನೊಂದು ಮಹತ್ವದ ಆದೇಶದಲ್ಲಿ ಆರ್​ಬಿಐ ತಿಳಿಸಿದೆ. ಎರಡಕ್ಕೂ ಹೆಚ್ಚು ವರ್ಷ ಯಾವುದೇ ವಹಿವಾಟು ನಡೆಸದ ಇಂತಹ ಖಾತೆಗಳನ್ನು ಬ್ಯಾಂಕುಗಳು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಿಸುತ್ತವೆ. ಈಗ ಆರ್​ಬಿಐ ಈ ಕ್ರಮವನ್ನು ಬದಲಿಸಿದೆ.

ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿರುವುದು ಅವಶ್ಯಕ. ಕೆಲ ಬ್ಯಾಂಕುಗಳು ಝೀರೋ ಬ್ಯಾಲನ್ಸ್ ಸೌಲಭ್ಯ ಹೊಂದಿರುತ್ತವೆ. ಸ್ಯಾಲರಿ ಅಕೌಂಟ್​ಗಳಿಗೂ ಈ ಸವಲತ್ತು ಇರುತ್ತದೆ. ಎಚ್​ಡಿಎಫ್​ಸಿ, ಎಕ್ಸಿಸ್ ಮೊದಲಾದ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಮೊತ್ತ 10,000 ರೂ ಇದೆ. ಕೆಲ ಬ್ಯಾಂಕುಗಳಲ್ಲಿ 1,000 ರೂನಿಂದ 10,000 ರೂವರೆಗೂ ಮಿನಿಮಮ್ ಬ್ಯಾಲನ್ಸ್ ಇರುತ್ತದೆ.

ಒಂದು ವೇಳೆ ಕನಿಷ್ಠ ಮೊತ್ತದ ಬ್ಯಾಲನ್ಸ್ ಉಳಿಸಿಕೊಳ್ಳದೇ ಹೋದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಮಿನಿಮಮ್ ಬ್ಯಾಲನ್ಸ್ ಇಲ್ಲದೇ ಹಲವು ವರ್ಷಗಳಿಂದ ಇನಾಪರೇಟಿವ್ ಆಗಿರುವ ಖಾತೆಗಳಿಗೆ ಹಲವು ಸಾವಿರ ರೂಗಳಷ್ಟು ದಂಡ ಬೀಳಬಹುದು. ಒಂದು ವೇಳೆ, ಗ್ರಾಹಕ ತಮ್ಮ ಹಳೆಯ ಖಾತೆಗೆ ಮರುಜೀವ ಪಡೆಯಲು ಬಯಸಿದರೂ ದಂಡ ಕಟ್ಟುವ ಭಯದಲ್ಲಿ ದೂರವಾಗಬಹುದು. ಇದನ್ನು ತಪ್ಪಿಸಲು ಆರ್​ಬಿಐ ಮಿನಿಮಮ್ ಬ್ಯಾಲನ್ಸ್ ಶುಲ್ಕ ವಸೂಲಿ ಮಾಡಬಾರದು ಎಂದು ಬ್ಯಾಂಕುಗಳಿಗೆ ಹೇಳಿದೆ.

ಈ ಹಿಂದೆಯೂ ಮಿನಿಮಮ್ ಬ್ಯಾಲನ್ಸ್ ವಿಚಾರದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ತಿಳಿಹೇಳಿರುವುದುಂಟು. ಮಿನಿಮಮ್ ಬ್ಯಾಲನ್ಸ್ ಉಳಿಸದ್ದಕ್ಕೆ ದಂಡವನ್ನು ವಿಧಿಸುವುದರಿಂದ ಖಾತೆಯ ಹಣ ನೆಗಟಿವ್​ಗೆ ಹೋಗುತ್ತದೆ. ಆ ರೀತಿ ದಂಡ ವಿಧಿಸದಂತೆ ಬ್ಯಾಂಕ್ ಎಚ್ಚರ ವಹಿಸಬೇಕು ಎಂದು ಆರ್​ಬಿಐ ಈ ಹಿಂದೆ ಹೇಳಿದ್ದಿತ್ತು.

ಹಿಂದಿನ ಲೇಖನರಾಜ್ಯಕ್ಕೆ  ಶೀಘ್ರ ಬರ ಪರಿಹಾರ, ಜಿಎಸ್ ಟಿ ಪಾಲು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ರಣದೀಪ್ ಸಿಂಗ್ ಸುರ್ಜೆವಾಲಾ ಶೀಘ್ರ ಬಿಡುಗಡೆಗೆ ಒತ್ತಾಯ
ಮುಂದಿನ ಲೇಖನಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಲಿ ಬಿ.ಕೆ ಹರಿಪ್ರಸಾದ್