ಮೈಸೂರು: ಮಂಡ್ಯ ರಮೇಶ್‌ಅವರ ನಟನರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಆಗಸ್ಟ್ ೧೩ರಂದು ಸಂಜೆ ೦೬.೩೦ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಕೃಷ್ಣೇಗೌಡರ ಆನೆ’ ನಾಟಕವು ಮಂಡ್ಯ ರಮೇಶ್ ಅವರ ನಿದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ನಾಟಕದ ರಂಗರೂಪ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಮೇಘ ಸಮೀರ ಅವರದ್ದು.
ಅಂದು ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಕುಮಾರ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಖ್ಯಾತ ವಾಗ್ಮಿ ಪ್ರೋ.ಎಮ್.ಕೃಷ್ಣೇಗೌಡರು, ಪ್ರಗತಿಪರ ರೈತರಾದ ನವೀನ ಸಂಗಾಪುರ ಮೊದಲಾದವರು ಭಾಗವಹಿಸಲಿದ್ದಾರೆ.