ಮನೆ ರಾಷ್ಟ್ರೀಯ ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್...

ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ

0

ಮುಂಬೈ: ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಅವರು ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದಾಗ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ತುಷಾರ್ ಗಾಂಧಿ ಅವರು ಟ್ವಿಟರ್​​ ನಲ್ಲಿ ಹಂಚಿಕೊಂಡಿದ್ದು,​​”ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾನು ಆಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಕ್ರಾಂತಿ ಮೈದಾನ ಮನೆಯಿಂದ ಹೊರಟಾಗ ಸಾಂತಾಕ್ರೂಜ್ ಪೊಲೀಸ್ ಬಂಧಿಸಿದ್ದಾರೆ. ಈ ದಿನದಂದೇ ನನ್ನನ್ನೂ ಬಂಧಿಸಿರುವುದು ನನಗೆ ಹೆಮ್ಮೆ ಇದೆ ಎಂದು ಟ್ವೀಟ್​​ ಮಾಡಿದ್ದಾರೆ.

ಪೊಲೀಸರ ವರದಿ ಪ್ರಕಾರ ಕ್ರಾಂತಿ ಮೈದಾನದಲ್ಲಿ ಮೌನ ಮೆರವಣಿಗೆ ಮಾಡಲು ಅವಕಾಶ ಇಲ್ಲ, ಆದರೆ ಈ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ಇದು ‘ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಹಣಕಾಸು ಸಚಿವಾಲಯ, ಎನ್‌ ಇಎಸ್‌ ಟಿಎಸ್‌ ನಲ್ಲಿ ಹಲವು ಉದ್ಯೋಗಾವಕಾಶ
ಮುಂದಿನ ಲೇಖನನಟನದಲ್ಲಿ ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ