ಮನೆ ಆರೋಗ್ಯ ಬೇಸಿಗೆಯಲ್ಲಿ ಬಾಡಿಹೀಟ್ ಕಡಿಮೆ ಮಾಡುವ ಪಾನೀಯಗಳು

ಬೇಸಿಗೆಯಲ್ಲಿ ಬಾಡಿಹೀಟ್ ಕಡಿಮೆ ಮಾಡುವ ಪಾನೀಯಗಳು

0

ಇನ್ನೇನು ಚಳಿಗಾಲ ಮುಗಿಯುತ್ತಾ ಬಂತು, ಬೇಸಿಗೆ ಕಾಲದ ಆಗಮನ ಹತ್ತಿರವಾಗುವ ಎಲ್ಲಾ ಲಕ್ಷಣಗಳು ಕೂಡ ಕಂಡು ಬರುತ್ತಿದೆ. ಬೆಳಗ್ಗಿನ ಚಳಿ, ತಂಪು ವಾತಾವರಣ ನಿಧಾನಕ್ಕೆ ಕಡಿಮೆ ಆಗುತ್ತಾ ಇದೆ, ಬಿಸಿಲಿನ ತಾಪಮಾನ ಜಾಸ್ತಿ ಆಗುತ್ತಿದೆ.

ಅದರಲ್ಲೂ ಬೆಳಗ್ಗೆ ಹನ್ನೊಂದು ಗಂಟೆಯ ಬಳಿಕ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಿಲ್ಲ, ಅಷ್ಟೊಂದು ಮಟ ಮಟ ಉರಿ ಬಿಸಿಲು, ಎಂತಹ ಸದೃಢ ಆರೋಗ್ಯ ಹೊಂದಿರುವವರನ್ನು ಕೂಡ, ಒಂದು ಕ್ಷಣಕ್ಕೆ ಅವರನ್ನು ಹೈರಾಣಾಗಿಸಿ ಬಿಡುತ್ತದೆ! ಈ ಸಮಯದಲ್ಲಿ ಎಷ್ಟು ನೀರು, ಪಾನೀಯ ಕುಡಿದರೂ ಸಾಲದು, ದೇಹದಲ್ಲಿ ದ್ರವಾಂಶವು ಬೆವರಿನ ಮೂಲಕ ಹೊರಹೋಗುವ ಕಾರಣ ದಿಂದಾಗಿ, ನಿರ್ಜಲೀಕರಣ ಸಮಸ್ಯೆ ಕೂಡ ಎದುರಾಗುತ್ತದೆ.

ಇದರಿಂದ ಮನುಷ್ಯನಿಗೆ ಬಹುಬೇಗನೆ ಆಯಾಸ, ಸುಸ್ತು ಕಂಡು ಬರಲು ಶುರುವಾಗುತ್ತದೆ. ಆದರೆ ಈ ಸಮಯದಲ್ಲಿ ತಂಪ ಪಾನೀಯ ಗಳನ್ನು ಕುಡಿಯುವ ಬದಲು ಕೆಲವೊಂದು ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡುವುದ ರಿಂದ ದೇಹಕ್ಕೆ ತಂಪು ಸಿಗುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಕೂಡ ಒಳ್ಳೆಯದು

ಮಜ್ಜಿಗೆ

• ಹಾಲಿನ ಉಪತ್ಪನ್ನವಾದ ಮೊಸರಿನಿಂದ ತಯಾರಾಗುವ ಮಜ್ಜಿಗೆ ತನ್ನಲ್ಲಿ ಅಪಾರವಾದ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ.

• ತನ್ನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್, ಖನಿಜಾಂಶ ಗಳನ್ನು ಒಳಗೊಂಡಿರುವ ಈ ಪಾನೀಯದಲ್ಲಿ ಆರೋಗ್ಯ ಕ್ಕೆ ಬೇಕಾಗುವ ಎಲ್ಲಾ ಬಗೆಯ, ಪೋಷ ಕಾಂಶಗಳು ಕೂಡ ಕಂಡು ಬರುತ್ತದೆ.

• ಅದರಲ್ಲೂ ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನದ ಹೊತ್ತಿಗೆ ಊಟದ ನಂತರ ಒಂದು ದೊಡ್ಡದಾದ ಲೋಟ ದಲ್ಲಿ ಮಜ್ಜಿಗೆ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡಿರುತ್ತಾರೆ ಬಹಳ ಒಳ್ಳೆಯದು.

ನಿರ್ಜಲೀಕರಣ ಸಮಸ್ಯೆ

• ಪ್ರಮುಖವಾಗಿ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡಿ, ದೇಹದಲ್ಲಿ ಯಾವುದೇ ಕಾರಣಕ್ಕೂ ನೀರಿನ ಅಂಶದ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

• ಅಷ್ಟೇ ಅಲ್ಲದೆ, ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ಕೂಡ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ.

ಎಳನೀರು

• ಎಳನೀರು ಈ ಜಗತ್ತಿನಲ್ಲಿ ಸಿಗುವ ಅತ್ಯುತ್ತಮ ಜೀವಜಲ ಎನ್ನುವುದರಲ್ಲಿ ಎರಡು ಮಾತಿಲ್ಲ! ಮನುಷ್ಯನ ಆರೋ ಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ, ಈ ಎಳ ನೀರಿನಲ್ಲಿ ಸಿಗುತ್ತದೆ.

• ಪ್ರಮುಖವಾಗಿ ಕಾಲ್ಸಿಯಂ, ಮೆಗ್ನೇಶಿಯಂ, ಗಂಧಕ, ಪೊಟ್ಯಾಶಿಯಂ ಸೋಡಿಯಂ ಮತ್ತು ಅವಶ್ಯಕ ಎಲೆ ಕ್ಟ್ರೋಲೈಟುಗಳು ಯಥೇಚ್ಛವಾಗಿ ಎಳನೀರಿನಲ್ಲಿ ಕಂಡು ಬರುವುದರಿಂದ, ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನ ಕಾಪಾಡುವುದರ ಜೊತೆಗೆ, ನಿರ್ಜ ಲೀಕರಣ ಸಮಸ್ಯೆ ಯಿಂದ ನಮ್ಮನ್ನು ದೂರವಿರಿಸುತ್ತದೆ.

ಜೀರಿಗೆ ಪಾನೀಯ

• ಜೀರಿಗೆಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ನೋಡಲು ಸಣ್ಣಗೆ ಇದ್ದರೂ ಇದರಲ್ಲಿ ಅಡಗಿರುವ ಆರೋಗ್ಯ ಕಾರಿ ಪ್ರಯೋಜನಗಳು ಮಾತ್ರ ಅಪಾರ.

• ಪ್ರಮುಖವಾಗಿ ಈ ಪುಟ್ಟ ಬೀಜಗಳಲ್ಲಿ ಕಂಡು ಬರುವ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಅಂಶಗಳು ದೇಹದ ಆರೋಗ್ಯ ಕಾಪಾಡುತ್ತದೆ.

• ಅದರಲ್ಲೂ ಬೇಸಿಗೆಯಲ್ಲಿ ಉರಿಬಿಸಿಲಿನ ದಾಹವನ್ನು ತಪ್ಪಿ ಸಲು, ಪ್ರತಿದಿನ ಎರಡು ಟೇಬಲ್ ಚಮಚ ಆಗು ವಷ್ಟು ಜೀರಿಗೆಯನ್ನು, ಅರ್ಧ ಲೋಟದಷ್ಟು ಆಗುವ ನೀರಿನಲ್ಲಿ ಮರುದಿನ ಬೆಳಗ್ಗೆ ಈ ನೀರನ್ನು ಸೋಸಿ ಕೊಂಡು, ಇದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ, ಪದೇ ಪದೇ ಬಾಯಾರಿಕೆ ಆದಾಗ ಕುಡಿಯುತ್ತಾ ಬಂದರೆ, ಉರಿ ಬಿಸಿಲಿನ ದಾಹ ಕಡಿಮೆ ಆಗುತ್ತಾ ಬರುತ್ತದೆ ಜೊತೆಗೆ ಆರೋಗ್ಯಕ್ಕೂ ಕೂಡ ಒಳ್ಳೆಯದು.

ಕಲ್ಲಂಗಡಿ ಸೌತೆಕಾಯಿ, ಸೋರೆಕಾಯಿ ಹೆಚ್ಚಾಗಿ ಸೇವಿಸಿ

• ನೀರಿನಾಂಶ ಹೆಚ್ಚಾಗಿರುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಉದಾಹರಣೆಗೆ ಕಲ್ಲಂಗಡಿ ಹಣ್ಣು, ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ, ಮೂಸಂಬಿ ಹಣ್ಣುಗಳನ್ನ ಸೇವಿಸಿ.

• ನೀರಿನಾಂಶ ಹೆಚ್ಚಿರುವ ತರಕಾರಿಗಳಾದ ಸೌತೆಕಾಯಿ, ಸೋರೆಕಾಯಿ, ಹಸಿರೆಲೆ ಸೊಪ್ಪುಗಳನ್ನು ಹೆಚ್ಚಾಗಿ ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿ. ಇವು ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳನ್ನು ಹಾಗೂ ನೀರಿನಂಶಗಳನ್ನು ಒದಗಿಸುತ್ತವೆ, ಹಾಗೂ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.