ಮನೆ ಅಪರಾಧ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ಓರ್ವ ಮೃತ್ಯು, ಚಾಲಕ ಪಾರು

ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ಓರ್ವ ಮೃತ್ಯು, ಚಾಲಕ ಪಾರು

0

ಕೊಟ್ಟಿಗೆಹಾರ: ಗೊಬ್ಬರ ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟು ಚಾಲಕ ಪವಾಡ ಸದೃಶ್ಯ ಪಾರಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿ ಬಳಿ ಗುರುವಾರ ನಡೆದಿದೆ.

Join Our Whatsapp Group

ಮೃತ ವ್ಯಕ್ತಿಯನ್ನು ಸತೀಶ್ (28) ಎಂದು ಗುರುತಿಸಲಾಗಿದೆ.

ಬಣಕಲ್ ನಿಂದ ಸಾರಗೋಡು ಗ್ರಾಮಕ್ಕೆ 50ಕ್ಕೂ ಹೆಚ್ಚು ಗೊಬ್ಬರದ ಚೀಲಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಹೊಕ್ಕಳ್ಳಿ ಬಳಿ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಈ ವೇಳೆ ಟ್ರ್ಯಾಕ್ಟರ್ ನಲ್ಲಿದ್ದ ಸತೀಶ್ ಸ್ಥಳದಲ್ಲೇ ಮೃತಪಟ್ಟರೆ ಚಾಲಕ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.

ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪ್ರವರ ನದಿಯಲ್ಲಿ ಮುಳುಗಿದವರನ್ನು ಹುಡುಕಲು ಹೋಗಿದ್ದ ಮೂವರು ಎಸ್ ​ಡಿಆರ್​ಎಫ್​ ಸಿಬ್ಬಂದಿ ಸಾವು
ಮುಂದಿನ ಲೇಖನಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ: 4 ಮಂದಿ ಸಾವು, 25 ಜನರಿಗೆ ಗಾಯ