ಮನೆ ಕಾನೂನು ಮದ್ಯ ಸೇವಿಸಿ ವಾಹನ ಚಾಲನೆ ಅಪರಾಧ: ಸುಪ್ರೀಂ ಕೋರ್ಟ್ ತೀರ್ಪು

ಮದ್ಯ ಸೇವಿಸಿ ವಾಹನ ಚಾಲನೆ ಅಪರಾಧ: ಸುಪ್ರೀಂ ಕೋರ್ಟ್ ತೀರ್ಪು

0

ನವದೆಹಲಿಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರವಾದ ದುರ್ನಡತೆ ಹಾಗೂ ಅಪರಾಧ ಎಂದು ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.

ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್‌ (ಪಿಎಸಿ) ಪಡೆಯನ್ನು ಕರೆದೊಯ್ದ ಟ್ರಕ್‌ನ ಚಾಲಕನೊಬ್ಬ ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ ನಡೆಸಿತು.

2000ದಲ್ಲಿ ಕುಂಭಮೇಳಕ್ಕೆ ಅಲಹಾಬಾದ್‌ನಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆದೊಯ್ಯುವಾಗ, ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿರುವ ಟ್ರಕ್‌ ಚಾಲಕನಿಗೆ ಕಡ್ಡಾಯ ನಿವೃತ್ತಿ ನೀಡಬೇಕು’ ಎಂದು ನ್ಯಾಯಪೀಠ ಆದೇಶಿಸಿತು.

ಹಿಂದಿನ ಲೇಖನಬೆಂಗೂರಿನಲ್ಲಿ ಭೀಕರ ಅಪಘಾತ; ಕಾರು ಸಂಪೂರ್ಣ ಜಖಂ
ಮುಂದಿನ ಲೇಖನನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹುಲಿಮರಿಗಳ ಕಳೇಬರ ಪತ್ತೆ