ಮನೆ ಸುದ್ದಿ ಜಾಲ ಜಮ್ಮು-ಕಾಶ್ಮೀರದಲ್ಲಿ 5.7 ತೀವ್ರತೆಯ ಭೂಕಂಪನ

ಜಮ್ಮು-ಕಾಶ್ಮೀರದಲ್ಲಿ 5.7 ತೀವ್ರತೆಯ ಭೂಕಂಪನ

0

ಶ್ರೀನಗರ( ಜಮ್ಮು- ಕಾಶ್ಮೀರ):  ಇಂದು ಜಮ್ಮು ಕಾಶ್ಮೀರ ಮತ್ತು ನೋಯ್ಡಾದಲ್ಲಿ  ಸುಮಾರು 5.7 ರಷ್ಟು ತೀವ್ರತೆಯ  ಭೂಕಂಪನ ಆಗಿರುವ ಕುರಿತು ವರದಿ ಆಗಿದೆ. ಆದರೆ ಯಾವುದೇ ಪ್ರದೇಶದಲ್ಲಿಯೂ ಸಾವು, ನೋವು ಆಸ್ತಿಹಾನಿಯಾದ ಕುರಿತು ವರದಿಯಾಗಿಲ್ಲ.

 ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲೂ ಈ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.

ಸುಮಾರು 5.7 ರಷ್ಟು ತೀವ್ರತೆ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ ಭಾರತೀಯ ಹವಮಾನ ಇಲಾಖೆ  ತಿಳಿಸಿದೆ. ಭೂಕಂಪನದ ಕೇಂದ್ರ ಬಿಂದು ಅಫ್ಘಾನಿಸ್ತಾನ- ತಜಿಕಿಸ್ತಾನ ಗಡಿಯಲ್ಲಿ ಕೇಂದ್ರೀಕೃತವಾಗಿದೆ ಎಂದು ಸಿಸ್ಮೋಲಜಿ ಕೇಂದ್ರ ಹೇಳಿದೆ.

ಹಿಂದಿನ ಲೇಖನಹಿಜಾಬ್​ ವಿವಾದ; ತಾಯಿ ಸರಸ್ವತಿ ತಾರತಮ್ಯ ಮಾಡೋದಿಲ್ಲ:  ರಾಹುಲ್​ ಗಾಂಧಿ
ಮುಂದಿನ ಲೇಖನಪ್ರೇಮಿಗಳ ದಿನದಂದು ನಿಮ್ಮ ರಾಶಿ ಭವಿಷ್ಯ