ಮನೆ ಜ್ಯೋತಿಷ್ಯ ಪ್ರೇಮಿಗಳ ದಿನದಂದು ನಿಮ್ಮ ರಾಶಿ ಭವಿಷ್ಯ

ಪ್ರೇಮಿಗಳ ದಿನದಂದು ನಿಮ್ಮ ರಾಶಿ ಭವಿಷ್ಯ

0

ಫೆಬ್ರವರಿ ತಿಂಗಳಿನಲ್ಲಿ ಬರುವ ಪ್ರೇಮಿಗಳ ದಿನ ಯುವಕ ಯುವತಿಯರ ಪಾಲಿಗೆ ಹಬ್ಬ ಎಂದರೆ ತಪ್ಪಾಗಲಾರದು. ಫೆಬ್ರವರಿ 14ರಂದು ಪ್ರೇಮಿಗಳು ತಮ್ಮ ಸಂಗಾತಿಯ ಖುಷಿಗಾಗಿ ದಿನವನ್ನು ಮೀಸಲಿಡುತ್ತಾರೆ. ಈ ನಡುವೆ 2022ರ ಪ್ರೇಮಿಗಳ ದಿನವು ಜ್ಯೋತಿಷ್ಯದ ಪ್ರಕಾರ ಹೇಗೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಮೇಷ ರಾಶಿ (ಮಾರ್ಚ್ 21 – ಏಪ್ರಿಲ್ 19)

ಈ ವ್ಯಾಲೆಂಟೈನ್ಸ್ ಡೇ ಮೇಷ ರಾಶಿಯವರಿಗೆ ಉತ್ತಮವಾಗಿರಲಿದೆ. ನೀವು ಸಾರ್ವಜನಿಕ ವಲಯದಲ್ಲಿ ನಿಮ್ಮ ಪ್ರೇಮ ಜೀವನವು ತ್ರಿಕೋನವಾಗಿರಲಿದೆ. ಸಿಂಹ ರಾಶಿಯಲ್ಲಿರುವ ಚಂದ್ರನು ನಿಮ್ಮ ರಾಶಿಯಲ್ಲಿ ಇರುವ ಸೂರ್ಯನಿಗೆ ತ್ರಿಕೋನ ಪ್ರೇಮವನ್ನು ಸೃಷ್ಟಿ ಮಾಡುತ್ತದೆ. ನೀವು ಒಬ್ಬಂಟಿಯಾಗಿದ್ದರೆ, ಎಲ್ಲರ ಕಣ್ಣು ನಿಮ್ಮ ಮೇಲೆ ಇರುತ್ತದೆ. ಈ ಸಮಯದಲ್ಲಿ ನೀವು ಇತರರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತೀರಿ.

ವೃಷಭ ರಾಶಿ (ಏಪ್ರಿಲ್ 20 – ಮೇ 20)

ಈ ವರ್ಷ ವೃಷಭ ರಾಶಿಯವರು ವ್ಯಾಲೆಂಟೈನ್ಸ್ ಡೇ ದಿನ ತಮ್ಮ ಸಂಗಾತಿಯ ಜೊತೆ ಖಾಸಗಿಯಾಗಿರುವ, ಆರಾಮಾದಾಯಕವಾಗಿರುವ ಸ್ಥಳದಲ್ಲಿ ಕಳೆಯಲಿದ್ದಾರೆ. ವೃಷಭ ರಾಶಿಯಲ್ಲಿ ಚಂದ್ರ ಇರುವ ಕಾರಣ ನಿಮ್ಮ ರಾತ್ರಿ ಬಹಳ ರೋಮ್ಯಾಂಟಿಕ್‌ ಆಗಿರಲು ನೀವು ಬಯಸುತ್ತೀರಿ. ಶುಕ್ರವು ನಿಮ್ಮ ಒಂಬತ್ತನೇ ಮನೆಯಲ್ಲಿ ದೂರದಲ್ಲಿದೆ. ನೀವು ರಾತ್ರಿಯ ಸಮಯವನ್ನು ಸಂಗಾತಿಯೊಂದಿಗೆ ಸುಂದರವಾಗಿ ಕಳೆಯಲಿದ್ದೀರಿ. ನೀವು ಸಂಗಾತಿಯ ಇಚ್ಛೆಗೆ ತಕ್ಕುದಾಗಿ ರೋಮ್ಯಾಂಟಿಕ್‌ ಆಗಿರಲು ಪ್ರಯತ್ನ ಮಾಡಬೇಕು

ಮಿಥುನ ರಾಶಿ (ಮೇ 21 – ಜೂನ್ 20)

ಮಿಥುನ ರಾಶಿಯವರ ವ್ಯಾಲೆಂಟೈನ್ಸ್ ಡೇಯು ಹೆಚ್ಚು ಲೈಂಗಿಕ ಸಂಭೋಗದ ದಿನವಾಗಲಿದೆ. ನಿಮ್ಮ ಲೈಂಗಿಕ ಮನೆಯು ಸಕ್ರಿಯವಾಗಿರುವ ಕಾರಣ ಈ ಪ್ರೇಮಿಗಳ ದಿನದಂದು ನೀವು ನಿಮ್ಮ ಪ್ರೇಯಸಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲಿದ್ದೀರಿ. ಹಾಗೆಯೇ ಲೈಂಗಿಕ ಕ್ರಿಯೆಯಲ್ಲಿ ನೀವು ಸದೃಢವಾಗಿರಲಿದ್ದೀರಿ.

ಕರ್ಕಾಟಕ ರಾಶಿ (ಜೂನ್ 21 – ಜುಲೈ 22)

ಕರ್ಕಾಟಕ ರಾಶಿಯವರು ಈ ವರ್ಷ ಹೆಚ್ಚು ರೋಮ್ಯಾಂಟಿಕ್ ಆಗಿ ಪ್ರೇಮಿಗಳ ದಿನವನ್ನು ಆನಂದಿಸುತ್ತಾರೆ. ನಿಮ್ಮ ಪ್ರೇಮ ಗೃಹದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಈ ವರ್ಷ ಪೂರ್ತಿ ನಿಮಗೆ ಸಿಹಿ ಕನಸಿನಂತೆ ಆಗಿರುತ್ತದೆ. ವರ್ಷ ಪೂರ್ತಿ ಪ್ರೇಮ ವಿಚಾರದಲ್ಲಿ ಸಿಹಿಯಾಗಿದೆ. ಬುಧವು ನಿಮ್ಮ ಸಂಬಂಧದ ವಲಯದಲ್ಲಿ ಇರುವ ಕೊನೆಯ ದಿನವೂ ಆಗಿರುತ್ತದೆ. ಆದ್ದರಿಂದ ನಿಮ್ಮ ಒಳಗಿನ ಇಚ್ಛೆಗಳನ್ನು ಮತ್ತು ಆಸೆಗಳನ್ನು ನಿಮ್ಮ ಸಂಗಾತಿಗೆ ತಿಳಿಸುವ ಮೂಲಕ ನೀವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಹೇಳಿದ್ದಕ್ಕೆ ನಿಮ್ಮ ಪ್ರೇಮಿಗಳು ತಲೆದೂಗುತ್ತಾರೆ.

ಸಿಂಹ ರಾಶಿ (ಜುಲೈ 23 – ಆಗಸ್ಟ್ 22)

ಸಿಂಹ ರಾಶಿಯಲ್ಲಿ ಇಡೀ ದಿನ ಮತ್ತು ರಾತ್ರಿ ನಿಮ್ಮ ರಾಶಿಯಲ್ಲಿ ಚಂದ್ರನ ಉಪಸ್ಥಿತಿ ಇರುವ ಕಾರಣದಿಂದಾಗಿ ನಿಮ್ಮ ಈ ವರ್ಷದ ಪ್ರೇಮ ಜೀವನವೇ ಉತ್ತಮವಾಗಿರಲಿದೆ. ಪ್ರೇಮಿಗಳ ದಿನದಲ್ಲಿ ಇನ್ನು ಉತ್ತಮವಾಗಿರಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವ ಕಾರಣ ನಿಮ್ಮ ಬಾಳಿಗೆ ಬೆಳಕು ಬಂದಂತೆ ಪ್ರೇಮ ಜೀವನ ಶೋಭಿಸುತ್ತದೆ. ನಿಮ್ಮ ಇಚ್ಛೆಯಂತೆ ಪ್ರೇಮ ಜೀವನ ಇರಲಿದೆ. ನೀವು ಒಂಟ್ಟಿಯಾಗಿದ್ದರೆ ಜಿಮ್‌ನಲ್ಲಿ, ಕೋವಿಡ್‌ ಟೆಸ್ಟಿಂಗ್‌ ಸೆಂಟರ್‌ನಲ್ಲಿ ಅಥವಾ ಇತರೆ ಪ್ರದೇಶದಲ್ಲಿ ನಿಮ್ಮ ಪ್ರೇಯಸಿ/ಪ್ರೇಮಿಯನ್ನು ಭೇಟಿ ಮಾಡಿ ಅಲ್ಲಿಂದ ಪ್ರೀತಿ ಉಂಟಾಗುವ ಸಾಧ್ಯತೆ ಇದೆ.

ಕನ್ಯಾರಾಶಿ (ಆಗಸ್ಟ್ 23 – ಸೆಪ್ಟೆಂಬರ್ 22)

ಕನ್ಯಾ ರಾಶಿಯವರು ಪ್ರೇಮಿಗಳ ದಿನದಂದು ಪ್ರಣಯ ತುಂಬಿದ ದಿನವನ್ನು ಹೊಂದುವ ಸಾಧ್ಯತೆ ಇದೆ. ಪ್ರೇಮಿಗಳ ದಿನದಂದು ಉಡುಗೊರೆ ದೊರೆಯುವುದೇ ನಿಮಗೆ ಸಂತಸವನ್ನು ಉಂಟು ಮಾಡಲಿದೆ. ನಿಮಗೆ ಪ್ರಣಯವನ್ನು ಹೆಚ್ಚು ಮಾಡಲು ಸಾಕಷ್ಟು ಶಕ್ತಿ ಇದೆ. ಶುಕ್ರ, ಉತ್ಕೃಷ್ಟ ಮಂಗಳ, ಬುಧ ಗ್ರಹ ಇರುವ ಕಾರಣ ಪ್ರಣಯ ಅಧಿಕವಾಗಿ ಇರಲಿದೆ. ಪ್ರೇಮಿಗಳ ದಿನದಂದು ನೀವು ಕೆಲವು ಕೊಡುಗೆಗಳನ್ನು ಪಡೆದರೆ ಆಶ್ಚರ್ಯಪಡಬೇಡಿ. ನೀವು ಪ್ರೀತಿಸದಿದ್ದರೂ ನಿಮ್ಮನ್ನು ಪ್ರೀತಿಸುವವರು ನಿಮ್ಮ ಹತ್ತಿರವೇ ಇರಲು ಬಯಸುತ್ತಾರೆ.

ತುಲಾ ರಾಶಿ (ಸೆಪ್ಟೆಂಬರ್ 23 – ಅಕ್ಟೋಬರ್ 22)

ತುಲಾ ರಾಶಿಯವರು ಪ್ರಣಯಕ್ಕಾಗಿ ಪ್ರತಿ ವರ್ಷ ಕಾಯುವ ದಿನವೇ ವ್ಯಾಲೆಂಟೈನ್ಸ್ ಡೇ ಆಗಿದೆ. ಅದೃಷ್ಟವಶಾತ್, ಫೆಬ್ರವರಿ 14 ನಿಮಗೆ ಅದ್ಭುತವಾದ ಅನುಭವ ಆಗಲಿದೆ. ನಿಮ್ಮ ಆಡಳಿತ ಗ್ರಹವಾದ ಶುಕ್ರವು ಆ ದಿನದಲ್ಲಿ ಮಂಗಳನ ಸಂಯೋಗದಲ್ಲಿ ಇರಲಿದೆ. ಈ ದಿನದಂದು ನಿಮ್ಮದು ಭಾವೋದ್ರಿಕ್ತ ಪ್ರೇಮ ಎಂದರೆ ತಪ್ಪಾಗಲಾರದು. ನೀವು ಪ್ರೇಮಿಗಳ ದಿನದಂದು ಲೈಂಗಿಕ ಸಂಭೋಗಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷಿ ಕ್ಲಾರಿಸ್ಸೆ ಮೊನಾಹನ್ ತಿಳಿಸಿದ್ದಾರೆ.

ವೃಶ್ಚಿಕ ರಾಶಿ (ಅಕ್ಟೋಬರ್ 23 – ನವೆಂಬರ್ 21)

ವೃಶ್ಚಿಕ ರಾಶಿಯವರು ಪ್ರೇಮಿಗಳ ದಿನದಂದು ಅತೀ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಈ ದಿನದಂದು ಹಲವಾರು ಮಂದಿ ನಿಮಗೆ ಪ್ರೇಮ ನಿವೇದನೆ ಮಾಡುವ ಸಾಧ್ಯತೆ ಇದೆ. ಆದ್ದರಿಂದಾಗಿ ಇಕ್ಕಟ್ಟಿನ ಸ್ಥಿತಿ ಉಂಟಾಗಬಹುದು. ಶುಕ್ರ ಮತ್ತು ಮಂಗಳ ಭೇಟಿಯ ಹಿನ್ನೆಲೆ ನೀವು ಅಂದುಕೊಂಡತೆ ನಡೆಯದು. ನಿಮಗೆ ಯಾರ ಮೇಲಾದರೂ ಪ್ರೀತಿ ಇದ್ದರೆ ಅವರಿಗೆ ತಿಳಿಸಿ, ಅಥವಾ ಸಂದೇಶ ಕಳುಹಿಸಿ.

ಧನು ರಾಶಿ (ನವೆಂಬರ್ 22 – ಡಿಸೆಂಬರ್ 21)

ಸಿಂಹ ರಾಶಿಯಲ್ಲಿರುವ ಚಂದ್ರನು ಧನು ರಾಶಿಯ ಮೇಲೆಯೂ ಪ್ರಭಾವ ಬೀರಲಿದೆ. ಪ್ರೇಮಿಗಳ ದಿನವು ನಿಮ್ಮ ಆತ್ಮದೊಂದಿಗೆ ಅಂದರೆ ನಿಮ್ಮೊಂದಿಗೆ ನೀವು ಕಳೆಯುವ ದಿನವಾಗಬಹುದು. ಹಾಗೆಯೇ ಬೇರೆ ದೇಶದಿಂದ ಆಗಮಿಸುವ ಅಥವಾ ಬೇರೆ ಪ್ರದೇಶದಿಂದ ಬರುವ ನಿಮ್ಮ ಪ್ರೇಮಿಯನ್ನು ಭೇಟಿ ಆಗುವ ಅವಕಾಶ ದೊರೆಯಬಹುದು.

ಮಕರ ರಾಶಿ (ಡಿಸೆಂಬರ್ 22 – ಜನವರಿ 19)

ದೀರ್ಘಕಾಲದವರೆಗೆ ಮೊದಲ ಬಾರಿಗೆ, ನೀವು ಪ್ರೇಮಿಗಳ ದಿನಕ್ಕಾಗಿ ಎದುರು ನೋಡುತ್ತಿರುವಿರಿ. ನೀವು ಡೇಟಿಂಗ್‌ನಲ್ಲಿ ಹೆಚ್ಚಾಗಿ ನಿಮ್ಮ ಸಮಯವನ್ನು ಕಳೆಯುವ ದಿನ ಇದಾಗಿದೆ. ನೀವು ಪ್ರೀತಿಯ ವಿಚಾರದಲ್ಲಿ ಪ್ರೇಮಿಗಳ ದಿನದಂದು ಹೆಚ್ಚು ದೈರ್ಯಶಾಲಿಯಾಗಿರಲಿದ್ದೀರಿ. ಯಾವುದೇ ರಿಸ್ಕ್‌ ತೆಗೆದುಕೊಂಡು ಪ್ರೇಮ ನಿವೇದನೆ ಮಾಡಲು ಸಿದ್ಧರಾಗಿರುವಿರಿ. ಹಾಗೆಯೇ ರಿಸ್ಕ್‌ ತೆಗೆದುಕೊಂಡು ಪ್ರೇಮಿಯೊಂದಿಗೆ ಸಮಯ ಕಳೆಯಲೂ ಸಿದ್ಧವಾಗಿರುವಷ್ಟು ನಿಮ್ಮಲ್ಲಿ ದೈರ್ಯ ಇರಲಿದೆ. ಈ ದಿನದಂದು ನೀವು ಯಾವ ರಿಸ್ಕ್‌ ತೆಗೆದುಕೊಂಡರೂ ನಿಮಗೆ ಉತ್ತಮ ಪ್ರತಿಫಲ ದೊರೆಯಲಿದೆ.

ಕುಂಭ ರಾಶಿ (ಜನವರಿ 20 – ಫೆಬ್ರವರಿ 18)

ಸಿಂಹ ರಾಶಿಯಲ್ಲಿರುವ ಚಂದ್ರನು ಕುಂಭ ರಾಶಿಯವರ ಮೇಲೆಯೂ ಪ್ರಭಾವ ಬೀರಲಿದೆ. ಅಂದರೆ ಪ್ರೇಮಿಗಳ ದಿನ, ಕುಂಭ ರಾಶಿಯವರ ಪ್ರೀತಿಯ ಜೀವನಕ್ಕೆ ಉತ್ತಮವಾದ ದಿನವಾಗಲಿದೆ. ನೀವು ಪ್ರೀತಿ ವಿಷಯದಲ್ಲಿ ಕೊಂಚ ದೂರ ಉಳಿಯುವವರು. ನಿಮ್ಮ ಸಂಬಂಧದ ಗೃಹದಲ್ಲಿ ಸಿಂಹ ರಾಶಿಯಲ್ಲಿನ ಚಂದ್ರಣ ಪ್ರಭಾವದಿಂದಾಗಿ ನೀವು ಸಾಂಪ್ರಾದಾಯಿಕವಾಗಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಿದ್ದೀರಿ.

ಮೀನ ರಾಶಿ (ಫೆಬ್ರವರಿ 19 – ಮಾರ್ಚ್ 20)

ಇದು ಫೆಬ್ರವರಿ 14 ನೀವು ನೆನಪಿಸಿಕೊಳ್ಳುವ ದಿನವಾಗಲಿದೆ. ಈ ಪ್ರೇಮಿಗಳ ದಿನದಂದು ಗುರು ಗ್ರಹವು ನಿಮ್ಮ ಮೀನ ರಾಶಿಯ ಸೂರ್ಯನೊಂದಿಗೆ ಸಂಯೋಗ ಆಗುವ ಕಾರಣದಿಂದಾಗಿ ನೀವು ಆನಂದದ ದಿನವನ್ನು ಕಳೆಯುತ್ತೀರಿ. 12 ವರ್ಷಗಳವರೆಗೆ ಈ ಸ್ಥಾನದಲ್ಲಿ ಬೇರೆ ಯಾವುದೇ ಪ್ರೇಮಿಗಳು ಬರಲಾರರು. ನೀವು ಪ್ರೇಮದ ವಿಚಾರದಲ್ಲಿ ಮುಂದಿನ ಹೆಜ್ಜೆ ಅಂದರೆ ಮದುವೆ, ಲೈಂಗಿಕ ಕ್ರಿಯೆ ಮೊದಲಾದವುಗಳ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಹಿಂದಿನ ಲೇಖನಜಮ್ಮು-ಕಾಶ್ಮೀರದಲ್ಲಿ 5.7 ತೀವ್ರತೆಯ ಭೂಕಂಪನ
ಮುಂದಿನ ಲೇಖನಕೊರೊನಾ: ದೇಶದಲ್ಲಿಂದು 1.27 ಲಕ್ಷ ಹೊಸ ಕೇಸ್ ಪತ್ತೆ