ಶುಂಠಿಯನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಗಳಲ್ಲೂ ಬಳಸಲಾಗುತ್ತದೆ. ಇದು ಭಾರತೀಯ ಅಡುಗೆ ಮನೆಗಳಲ್ಲಿ ನಿಯಮಿತವಾಗಿ ಬಳಸಲ್ಪಡುವ ಒಂದು ಮಸಾಲೆಯಾಗಿದೆ. ಇದು ರುಚಿಕರವಾದ ಪರಿಮಳವನ್ನು ಹೊಂದಿದ್ದು, ಅದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇವುಗಳು ಆಹಾರಕ್ಕೆ ಉತ್ತಮವಾದ ರುಚಿಯನ್ನು ನೀಡುವುದು ಮಾತ್ರವಲ್ಲದೆ ಈ ವಿನಮ್ರ ಮಸಾಲೆಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಅನೇಕ ವರ್ಷಗಳಿಂದಲೂ ಈ ಶುಂಠಿಯನ್ನು ಜೀರ್ಣಕ್ರಿಯೆಗೆ ಸಹಾಯ ಮಾಡಲು, ವಾಕರಿಕೆ ಕಡಿಮೆ ಮಾಡಲು ಮತ್ತು ಸಾಮಾನ್ಯ ಶೀತ ಮತ್ತು ಜ್ವರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಈ ಶುಂಠಿಯು ಇತರ ತಾಜಾ ಮಸಾಲೆಗಳಂತೆ, ಶುಂಠಿಯು ಸಹ ಸೀಮಿತ ಶೇಖರಣಾ ಜೀವನವನ್ನು ಹೊಂದಿದೆ. ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಶುಂಠಿ ಇದ್ದರೆ, ಅದು ಹಾಳಾಗಿ ಹೋಗುತ್ತದೆ ಎನ್ನುವ ಚಿಂತೆ ನಿಮಗಿದ್ದರೆ, ಆ ಶುಂಠಿಯನ್ನು ಪುಡಿ ಮಾಡಿ ಇಟ್ಟುಕೊಳ್ಳುವ ಮುಲಕ ಅದರ ಶೇಖರಣಾ ಜೀವನವನ್ನು ಹೆಚ್ಚಿಸಬಹುದು. ಒಣ ಶುಂಠಿ ಪುಡಿಯನ್ನು ಅಡುಗೆಯಲ್ಲಿ ಮಸಾಲೆಯಾಗಿ ಬಳಸಬಹುದು. ಮನೆಯಲ್ಲಿ ಶುಂಠಿ ಪುಡಿಯನ್ನು ಮಾಡಲು ಈ ಕೆಲವು ಹಂತಗಳನ್ನು ಪಾಲಿಸಿ.
ಮನೆಯಲ್ಲಿ ಶುಂಠಿ ಪುಡಿಯನ್ನು ತಯಾರಿಸುವ ಸುಲಭ ವಿಧಾನ:
ಹಂತ 1– ತಾಜಾ ಶುಂಠಿಯನ್ನು ಆರಿಸಿಕೊಳ್ಳಿ: ಮೊದಲ ಹಂತವೆಂದರೆ ಶುಂಠಿ ಪುಡಿ ಮಾಡಲು ನೀವು ಶುದ್ಧ ತಾಜಾ ಶುಂಠಿಯನ್ನು ಹೊಂದಿರಬೇಕು. ಇದು ತಾಜಾವಾಗಿದೆಯೇ ಎಂದು ಪರಿಶೀಲಿಸಲು, ಶುಂಠಿಯ ಒಂದು ಸಣ್ಣ ತುಂಡನ್ನು ಮುರಿದು ಅದರ ನಡುವೆ ಯಾವುದೇ ದಾರದ ನಾರು ಇಲ್ಲದೆ ಅದು ಸುಲಭವಾಗಿ ತುಂಡಾದರೆ ಅದು ತಾಜಾವಾಗಿರುತ್ತದೆ. ಕಡಿಮೆ ನಾರುಗಳನ್ನು ಹೊಂದಿರುವ ಶುಂಠಿಯನ್ನು ಪುಡಿ ಮಾಡಲು ಬಳಸುವುದು ಉತ್ತಮ ಏಕೆಂದರೆ ಹೆಚ್ಚು ನಾರಿದ್ದರೆ ಅದನ್ನು ಪುಡಿ ಮಾಡಲು ಕಷ್ಟವಾಗುತ್ತದೆ.
ಹಂತ 2- ತೊಳೆಯುವುದು ಮತ್ತು ಒಣಗಿಸುವುದು: ಯಾವುದೇ ಕಚ್ಚಾ ಆಹಾರ ಪದಾರ್ಥಗಳನ್ನು ಕೊಳೆ ಮತ್ತು ಸೂಕ್ಷ್ಮಾಣು ಮುಕ್ತವಾಗಿಡಲು ತೊಳೆಯುವುದು ಮುಖ್ಯ. ಹಾಗೆಯೇ ಶುಂಠಿಯನ್ನು ಯಾವುದೇ ಕೊಳೆ ಇರದಂತೆ ಕೂಡಾ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ನಂತರ ಶುದ್ಧ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಿ.
ಹಂತ 3- ಸಿಪ್ಪೆ ಸುಳಿಯುವುದು ಮತ್ತು ಕತ್ತರಿಸುವುದು: ಶುಂಠಿಯು ಚೆನ್ನಾಗಿ ಸ್ವಚ್ಛಗೊಳಿಸಿದ ಮೇಲೆ ಅದರ ಸಿಪ್ಪೆಯನ್ನು ಸುಳಿಯುವುದು ತುಂಬಾ ಮುಖ್ಯವಾಗಿರುತ್ತದೆ. ಹರಿವಾದ ಚಾಕುವಿನ ಸಹಾಯದಿಂದ ಶುಂಠಿಯ ಸಿಪ್ಪೆಯನ್ನು ತೆಗೆದುಹಾಕಿ ನಂತರ ಶುಂಠಿಯನ್ನು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿದ ಮೇಲೆ ಒಣಗಲು ಬಿಡಿ, ಇದರಿಂದ ಶುಂಠಿಯಲ್ಲಿನ ನೀರಿನಾಂಶ ಆವಿಯಾಗುತ್ತದೆ.
ಹಂತ 4 ನಿರ್ಜಲೀಕರಣ: ಶುಂಠಿಯನ್ನು ಒಣಗಿಸುವುದು ಕಠಿಣವಲ್ಲ. ಶುಂಠಿಯ ಚೂರುಗಳನ್ನು ಪ್ಲೇಟ್ ಅಥವಾ ಟ್ರೇನಲ್ಲಿ ಇರಿಸಿ 9 ರಿಂದ 10 ದಿನಗಳವರೆಗೆ ಬಿಸಿಲಿನಲ್ಲಿ ಒಣಗಲು ಬಿಡಿ. ಶುಂಠಿಯ ಎರಡು ಬದಿಗಳನ್ನು ಸರಿಯಾಗಿ ಒಣಗಿಸಿ. ಆಗ ಅದು ಸಂಪೂರ್ಣವಾಗಿ ಒಣಗುತ್ತದೆ.
ಹಂತ 5 ಪುಡಿ ತಯಾರಿಸುವುದು: ಒಣ ಶುಂಠಿಯ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಯಾವುದೇ ರೀತಿಯ ಹೋಳುಗಳು ಉಳಿದಿರದಂತೆ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಮತ್ತು ಅದರ ಮೃದು ವಿನ್ಯಾಸಕ್ಕಾಗಿ ನೀವು ಪುಡಿಯನ್ನು ಜರಡಿ ಮಾಡಬಹುದು.
ಶುಂಠಿ ಪುಡಿಯನ್ನು ಹೇಗೆ ಸಂಗ್ರಹಿಸಿಡುವುದು: ನೀವು ಅದನ್ನು ಗಾಳಿಯಾಡದ ಧಾರಕದಲ್ಲಿ ಸಂಗ್ರಹಿಸಬಹುದು. ಮತ್ತು ಶುಂಠಿ ಪುಡಿಯನ್ನು ಹಾಕಿಡುವ ಕಂಟೇನರ್ ನಲ್ಲಿ ಯಾವುದೇ ರೀತಿಯ ತೇವಾಂಶ ಇರದೆ ಶುಷ್ಕ ಮತ್ತು ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ಸಂಗ್ರಹಿಸಿಟ್ಟ ಪುಡಿಯ ಕಂಟೇನರ್ ನ್ನು ಶುಷ್ಕ ಸ್ಥಳದಲ್ಲಿ ಇರಿಸಬಹುದು ಅಥವಾ ರೆಫ್ರಿಜರೆಟರ್ ನಲ್ಲೂ ಇಡಬಹುದು. ಈ ರೀತಿ ಮಾಡುವುದರಿಂದ ಶುಂಠಿ ಪುಡಿ ಹಾಳಾಗದೆ ತಿಂಗಳುಗಳವರೆಗೆ ಇರುತ್ತದೆ.















